ಸಿನಿಮಾ ಸುದ್ದಿ

'ನಟರಾಜ ಸರ್ವಿಸ್' ಗೆ ಬಾಲ ಖಳನಾಯಕ

ಪುನೀತ್ ರಾಜಕುಮಾರ್ ಅರ್ಪಿಸಲಿರುವ ಎನ್ ಎಸ್ ರಾಜಕುಮಾರ್ ನಿರ್ಮಾಣದ 'ನಟರಾಜ್ ಸರ್ವಿಸ್' ಸಿನೆಮಾಗೆ ಸಿ ಎಂ ಬಾಲ ಖಳನಾಯಕರಾಗಿ ಆಯ್ಕೆಯಾಗಿದ್ದಾರೆ.

'ನಟರಾಜ ಸರ್ವಿಸ್' ಗೆ ಬಾಲ ಖಳನಾಯಕ
ಸಿ ಎಂ ಬಾಲ
Published On :

ಬೆಂಗಳೂರು: ಪುನೀತ್ ರಾಜಕುಮಾರ್ ಅರ್ಪಿಸಲಿರುವ ಎನ್ ಎಸ್ ರಾಜಕುಮಾರ್ ನಿರ್ಮಾಣದ 'ನಟರಾಜ್ ಸರ್ವಿಸ್' ಸಿನೆಮಾಗೆ ಸಿ ಎಂ ಬಾಲ ಖಳನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಸಿನೆಮಾವನ್ನು ನಿರ್ದೇಶಕ ಪವನ್ ಒಡೆಯರ್ ನಿರ್ದೇಶಿಸುತ್ತಿದ್ದು ಶರಣ್ ನಾಯಕ ನಟ. "ನನಗೆ ಜನಪ್ರಿಯ ನಟನ ಅವಶಕತೆ ಇತ್ತು. ಪಾತ್ರಕ್ಕೆ ಬಾಲ ಸರಿಯಾಗಿ ಹೊಂದಾಣಿಕೆಯಾದರು" ಎನ್ನುತ್ತಾರೆ ಪವನ್.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಾಲ ಜನಪ್ರಿಯ ನಟ. ಕಾಂಚನ -೨ ರಲ್ಲಿ ಅವರ ನಟನೆ ಎಲ್ಲರ ಗಮನ ಸೆಳೆದಿತ್ತು. "ಪವನ್ ಕಾಂಚನ-೨ ರಲ್ಲಿ ನನ್ನ ನಟನೆಯನ್ನು ನೋಡಿ ಆಯ್ಕೆ ಮಾಡಿದ್ದಾರೆ" ಎನ್ನುತ್ತಾರೆ ನಟ.

ಬಾಲ ಅನಂತರಾಜು ನಿರ್ದೇಶನದ ಕಲ್ಪನಾ-೨ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಕಾಂಚನ೨ ರಿಮೇಕ್ ಕಲ್ಪನಾ ೨. ಈ ಸಿನೆಮಾದಲ್ಲೂ ತಮಿಳು ಮೂಲದಲ್ಲಿ ನಟಿಸಿದ್ದ ಪಾತ್ರವನ್ನೇ ಮಾಡಲಿದ್ದಾರೆ.

ಶರಣ್ ನಟಿಸಿರುವ ಒಂದೆರಡು ಸಿನೆಮಾಗಳನ್ನು ನೋಡಿರುವ ಬಾಲ ಶರಣ್ ಒಳ್ಳೆಯ ಮನರಂಜನೆ ನೀಡುವ ನಟ ಎಂದಿದ್ದಾರೆ. "ಕಾಮಿಡಿ ಟ್ರ್ಯಾಕ್ ಇರುವ ಸಿನೆಮಾದಲ್ಲಿ ಖಳನಟನಾಗಿ ಅಭಿನಯಿಸುವುದು ಸವಾಲು. ನಟರಾಜ ಸರ್ವಿಸ್ ನಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ" ಎನ್ನುತ್ತಾರೆ ಬಾಲ.

ನವೆಂಬರ್ ೨೦ ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.