ಮಹದೇಶ್ವರ ಬೆಟ್ಟಕ್ಕೆ ಹೊರಟ ರಾಮಗೋಪಾಲ ವರ್ಮ
ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಯೋಜನೆ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾಗೆ ನಿರ್ದೇಶಕ ರಾಮ ಗೋಪಾಲ್ ವರ್ಮಾ ಬೆವರು ಸುರಿಸುತ್ತಿದ್ದಾರೆ.

ಬೆಂಗಳೂರು: ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಯೋಜನೆ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾಗೆ ನಿರ್ದೇಶಕ ರಾಮ ಗೋಪಾಲ್ ವರ್ಮಾ ಬೆವರು ಸುರಿಸುತ್ತಿದ್ದಾರೆ. ಸಂಶೋಧನೆಗೆ ಹೆಸರುವಾಸಿಯಾದ ಕೆಲವೇ ನಿರ್ದೇಶಕರಲ್ಲೊಬ್ಬರಾದ ವರ್ಮಾ ಮಹತ್ತ್ವದ ಸಿನೆಮಾವೊಂದನ್ನು ನಿರ್ದೇಶಿಸಲಿದ್ದಾರೆ ಎಂಬ ಭರವಸೆಯಂತೂ ಇದೆ.
ಜೂನ್ ೯ ರಿಂದ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದಿದ್ದಾರೆ ನಿರ್ದೇಶಕರು. ಕನ್ನಡ, ಹಿಂದಿ, ತಲಗು ಮತ್ತು ತಮಿಳು ಭಾಷೆಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಸಿನೆಮಾಗೆ ಅಂತಿಮ ಪಾತ್ರವರ್ಗದ ಶೋಧನೆಯಲ್ಲಿದ್ದಾರೆ ವರ್ಮ. ಈಗಾಗಲೇ ಚಿತ್ರೀಕರಣದ ಪ್ರದೇಶಗಳನ್ನು ಗುರುತಿಸಿದ್ದು, ಸಂಗಿತದ ಪರಿಕಲ್ಪನೆಯೂ ಮುಗಿದಿದೆ.
ಮುಖ್ಯಪಾತ್ರವೊಂದರಲ್ಲಿ ನಟಿಸುತ್ತಿರುವ ನಟ ಶಿವರಾಜ ಕುಮಾರ್ ತಂಡವನ್ನು ಜೂನ್ ೨೩ಕ್ಕೆ ಸೇರಿಕೊಳ್ಳಲಿದ್ದಾರೆ. "ರಾಷ್ಟ್ರೀಯ ನಾಟಕ ಶಾಲೆಯ ಹಲವು ವಿದ್ಯಾರ್ಥಿಗಳನ್ನು ನಟನೆಗೆ ವರ್ಮಾ ಆಯ್ಕೆ ಮಾಡಿದ್ದು, ಕನ್ನಡ ಚಲನಚಿತ್ರೋದ್ಯಮ ಕೆಲವೇ ನಟರು ಈ ಸಿನೆಮಾದಲ್ಲಿ ಜಾಗ ಪಡೆದಿದ್ದಾರೆ" ಎಂದು ಮೂಲಗಳು ತಿಳಿಸಿವೆ.
ವೀರಪ್ಪನ್ ನ ವಾಸಸ್ಥಾನಗಳಲ್ಲಿ ಒಂದಾಗಿದ್ದ ಮಲೆ ಮಹದೇಶ್ವರ ಬೆಟ್ಟದಲ್ಲಿ ವರ್ಮಾ ಚಿತ್ರೀಕರಣ ನಡೆಸಲಿದ್ದಾರೆ. ಸ್ಟಂಟ್ ಗಳ ನಿರ್ದೇಶನಕ್ಕೆ ಧೂಮ್-೩ ಸಿನೆಮಾದ ಸ್ಟಂಟ್ ಮಾಸ್ಟರ್ ಅವರನ್ನು ಕೆರೆತಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


