ನಿರ್ಮಾಪಕನಿಂದ ಸಹ ನಟಿ ಮೇಲೆ ಅತ್ಯಾಚಾರ ಯತ್ನ ಆರೋಪ
ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಬಿಸಿಲು ಕುದುರೆ ಚಿತ್ರದ ನಿರ್ಮಾಪಕ ಕುಮಾರ್ ಎಂಬವರ ವಿರುದ್ಧ ಚಿತ್ರದ ಸಹ ನಟಿ ಹಾಸನ ಮೂಲದ ರಜನಿ ಎಂಬುವರು ಫಿಲಂ...

ಬೆಂಗಳೂರು: ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಬಿಸಿಲು ಕುದುರೆ ಚಿತ್ರದ ನಿರ್ಮಾಪಕ ಕುಮಾರ್ ಎಂಬವರ ವಿರುದ್ಧ ಚಿತ್ರದ ಸಹ ನಟಿ ಹಾಸನ ಮೂಲದ ರಜನಿ ಎಂಬುವರು ಫಿಲಂ ಚೇಂಬರ್ ನಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ.
ಬಿಸಿಲು ಕುದುರೆ ಚಿತ್ರದ ಚಿತ್ರೀಕರಣಕ್ಕೆಂದು ತಮ್ಮನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಮನೆಯೊಂದರಲ್ಲಿ ತಮ್ಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಆ ರಾತ್ರಿ ತಾವು ಮಲಗಿದ್ದ ವೇಳೆ ಪಾನಮತ್ತರಾಗಿ ಬಂದ ಕುಮಾರ್ ತಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು ಈ ಸಂಬಂಧ ಮಾರ್ಚ್ 22 ರಂದು ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ, ಆದರೆ ಎಫ್ಐಆರ್ ದಾಖಲಿಸದೆ ನಿರ್ಮಾಪಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದೆ ಎಂದು ರಜನಿ ಹೇಳಿದ್ದಾರೆ.
ಈ ನಡುವೆ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕುಮಾರ್, ತಾವು 'ಬಿಸಿಲು ಕುದುರೆ' ಚಿತ್ರದ ನಿರ್ಮಾಪಕರಲ್ಲ. ಸಹ ನಟಿ ಅನವಶ್ಯಕವಾಗಿ ತಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆಂದು ಹೇಳುತ್ತಿದ್ದಾರೆ. ಪ್ರಕರಣ ಈಗ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದು, ನಿರ್ಮಾಪಕ ಹಾಗೂ ಅತ್ಯಾಚಾರ ಆರೋಪ ಮಾಡಿರುವ ಸಹ ನಟಿಯನ್ನು ಹಾಜರಾಗುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


