'ಎ ಬ್ಯೂಟಿಫುಲ್ ಮೈಂಡ್' ಸ್ಫೂರ್ತಿ ಜಾನ್ ನ್ಯಾಶ್ ಮತ್ತು ಪತ್ನಿ ಅಪಘಾತದಲ್ಲಿ ಸಾವು
ಗಣಿತಶಾಸ್ತ್ರ ಮೇಧಾವಿ ಹಾಗು ೨೦೦೧ರ 'ಎ ಬ್ಯೂಟಿಫುಲ್ ಮೈಂಡ್' ಸಿನೆಮಾಗೆ ಸ್ಫೂರ್ತಿಯಾಗಿದ್ದ ಜಾನ್ ಫೋರ್ಬ್ಸ್ ನ್ಯಾಸ್ ಅವರು ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಅಸುನೀಗಿದ್ದಾರೆ.

ಟ್ರೆಂಟನ್: ಗಣಿತಶಾಸ್ತ್ರ ಮೇಧಾವಿ ಹಾಗು ೨೦೦೧ರ 'ಎ ಬ್ಯೂಟಿಫುಲ್ ಮೈಂಡ್' ಸಿನೆಮಾಗೆ ಸ್ಫೂರ್ತಿಯಾಗಿದ್ದ ಜಾನ್ ಫೋರ್ಬ್ಸ್ ನ್ಯಾಸ್ ಅವರು ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಅಸುನೀಗಿದ್ದಾರೆ. ಅವರಿಗೆ ೮೬ ವರ್ಷ ವಯಸ್ಸಾಗಿತ್ತು. ಇದೇ ಸಂದರ್ಭದಲ್ಲಿ ಅವರ ಪತ್ನಿ ಕೂಡ ಸಾವನ್ನಪ್ಪಿದ್ದಾರೆ.
ಮನೆಯಿಂದ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಮೂಲಕ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಎ ಬ್ಯೂಟಿಫುಲ್ ಮೈಂಡ್' ಚಲನಚಿತ್ರದಲ್ಲಿ ನ್ಯಾಶ್ ಪಾತ್ರ ವಹಿಸಿದ್ದ ರಸಲ್ ಕ್ರೋವ್ 'ಆಘಾತವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ. "ನಮ್ಮದು ಒಳ್ಳೆಯ ಪಾಲುದಾರಿಕೆ ಇತ್ತು" ಎಂದಿರುವ ಅವರು "ಸುಂದರ ಮನಸ್ಸುಗಳು, ಸುಂದರ ಹೃದಯಗಳು" ಎಂದು ಕೂಡ ಟ್ವೀಟ್ ಮಾಡಿದ್ದಾರೆ.
ತಮ್ಮ ಪ್ರತಿಭೆಗೆ ಹಾಗೂ ವಿಲಕ್ಷಣ ಮನಸ್ಥಿತಿಗೆ ಹೆಸರುವಾಸಿಯಾಗಿದ್ದ ಜಾನ್ ನ್ಯಾಶ್ ಹಲವು ವರ್ಷಗಳವರೆಗೆ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಹಿರಿಯ ಗಣಿತಶಾಸ್ತ್ರ ಸಂಶೋಧಕನಾಗಿ ಕೆಲಸ ನಿರ್ವಹಿಸಿದ್ದರು. ೧೯೯೪ರಲ್ಲಿ 'ಗೇಮ್ ಥಿಯರಿ' ವಿಭಾಗದಲ್ಲಿ ಅವರು ನಡೆಸಿದ ಸಂಶೋಧನೆಗೆ ಅರ್ಥಶಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು. ಎಂ ಐ ಟಿ ವಿಶ್ವವಿದ್ಯಾಲಯದಲ್ಲಿ ಕೂಡ ಹಲವು ವರ್ಷಗಳ ಕಾಲ ಬೋಧನೆ ಮಾಡಿದ್ದರು.
ಇವರ ಜೀವನ ಆಧಾರಿತ 'ಎ ಬ್ಯೂಟಿಫುಲ್ ಮೈಂಡ್' ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿತ್ತು. ಅದರಲ್ಲಿ ಅತ್ಯುತ್ತಮ ಸಿನೆಮಾ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಸೇರಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


