ನನಗೆ ಮದುವೆ ಆಗಿಲ್ಲ: ನಯನ್ ತಾರಾ
ನನಗೆ ಮದುವೆಯಾಗಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು. ನನ್ನ ಜೀವನದಲ್ಲಿ ಸಿನಿಮಾಕ್ಕೆ ಮಾತ್ರ ಈಗ ಹೆಚ್ಚು ಪ್ರಾಶಸ್ತ್ಯ. ಒಂದು ಹುಡುಗಿಗೆ...

ಕೊಚ್ಚಿ: ನನಗೆ ಮದುವೆಯಾಗಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು. ನನ್ನ ಜೀವನದಲ್ಲಿ ಸಿನಿಮಾಕ್ಕೆ ಮಾತ್ರ ಈಗ ಹೆಚ್ಚು ಪ್ರಾಶಸ್ತ್ಯ. ಒಂದು ಹುಡುಗಿಗೆ ಸಂಬಂಧಿಸಿದಂತೆ ವಿವಾಹ ಎಂಬುದು ದೊಡ್ಡ ವಿಷಯವೇ. ಅಂಥಾ ವಿಷಯಗಳು ನನ್ನ ಜೀವನದಲ್ಲಿ ನಡೆದರೆ ಅದನ್ನು ನಾನು ಜಗತ್ತಿಗೆ ತಿಳಿಸುತ್ತೇನೆ, ಅದು ಬಿಟ್ಟು ರಹಸ್ಯವಾಗಿ ಮದುವೆಯಾಗುವುದಿಲ್ಲ ಎಂದು ನಯನ್ ತಾರಾ ಹೇಳಿದ್ದಾರೆ.
ನಾನು ಮದುವೆಯಾಗಿದ್ದೇನೆ ಎಂಬ ಸುದ್ದಿಯಲ್ಲಿ ಹುರುಳಿಲ್ಲ. ಇಂಥಾ ಸುದ್ದಿಗಳು ನನ್ನ ಮೇಲೆ ಮತ್ತು ನನ್ನ ಸಿನಿಮಾದ ಮೇಲೆ ಪ್ರಭಾವಬೀರುತ್ತವೆ ಎಂದು ನಿರ್ದೇಶಕ ವಿಘ್ನೇಶ್ ಶಿವನ್ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ವೇಳೆ ಈ ವಿಷಯದಲ್ಲಿ ಮಾಧ್ಯಮಗಳು ಮೂಗು ತೂರಿಸಬೇಡಿ ಎಂದು ವಿಘ್ನೇಶ್ ಹೇಳಿದ್ದಾರೆ
ನಯನ್ ತಾರಾ ಮತ್ತು ವಿಘ್ನೇಶ್ ಶಿವನ್ ಕೇರಳದ ಕೊಚ್ಚಿಯಲ್ಲಿರುವ ಇಗರ್ಜಿಯೊಂದರಲ್ಲಿ ಕದ್ದು ಮುಚ್ಚಿ ವಿವಾಹವಾಗಿದ್ದಾರೆ ಎಂದು ಸುದ್ದಿಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


