ಬಾಹುಬಲಿ ಚಿತ್ರದಲ್ಲಿನ ಕಿಚ್ಚ ಸುದೀಪ್‌ರ ಫಸ್ಟ್ ಲುಕ್ ರಿಲೀಸ್!
ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹುಬಲಿಯಲ್ಲಿ ಕನ್ನಡದ ಕಿಚ್ಚ ಸುದೀಪ್ ಅಭಿನಯಿಸಿರುವುದು ಗೊತ್ತಿರುವ ವಿಚಾರವೇ...

ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹುಬಲಿಯಲ್ಲಿ ಕನ್ನಡದ ಕಿಚ್ಚ ಸುದೀಪ್ ಅಭಿನಯಿಸಿರುವುದು ಗೊತ್ತಿರುವ ವಿಚಾರವೇ. ಇದೀಗ ಚಿತ್ರದಲ್ಲಿ ಸುದೀಪ್ ಯಾವ ಪಾತ್ರ ಪೋಷಣೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ರಾಜಮೌಳಿ ಟ್ವೀಟ್ ಮಾಡಿದ್ದಾರೆ.
ಬಾಹುಬಲಿ ಚಿತ್ರದಲ್ಲಿನ ಸುದೀಪ್ ಅವರ ಫಸ್ಟ ಲುಕ್ ರಿಲೀಸ್ ಆಗಿದ್ದು, ಚಿತ್ರದಲ್ಲಿ ಪರ್ಷಿಯಾದ ಯೋಧ ಅಸ್ಲಂ ಖಾನ್ ಪಾತ್ರವನ್ನು ಮಾಡುತ್ತಿದ್ದಾರೆ. ರಾಜಮೌಳಿ ರಿಲೀಸ್ ಮಾಡಿರುವ ಫಸ್ಟ್ ಲುಕ್ ನಲ್ಲಿ ಸುದೀಪ್ ಕೈಯಲ್ಲೊಂದು ದೊಡ್ಡ ಕತ್ತಿ ಹಿಡಿಯುತ್ತಾ, ಸಿಟ್ಟಿನಿಂದ ನೋಡುತ್ತಿರುವ ಚಿತ್ರ ಅಭಿಮಾನಿಗಳಲ್ಲಿ ಕಿಚ್ಚು ಹೆಚ್ಚಿಸಿದೆ.
ರಾಜಮೌಳಿ ನಿರ್ದೇಶನದ ಈಗ ಚಿತ್ರದಲ್ಲಿ ನಟಿಸಿದ್ದ ಸುದೀಪ್ ಮತ್ತೆ ಬಾಹುಬಲಿಯಲ್ಲಿ ನಟಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಜಮೌಳಿ ಸುದೀಪ್ ಗೆ ಧನ್ಯವಾದ ಹೇಳಿದ್ದು, ನನ್ನ ಮನವಿ ಮೇರೆಗೆ ಸುದೀಪ್ ಅವರು ಬಾಹುಬಲಿಯಲ್ಲಿ ಚಿತ್ರದಲ್ಲಿ ಚಿಕ್ಕ ಪಾತ್ರವೊಂದನ್ನು ಪೋಷಿಸಿದ್ದಾರೆ ಎಂದಿದ್ದಾರೆ. ಇನ್ನೇನ್ನು ಚಿತ್ರ ಜುಲೈನಲ್ಲಿ ತೆರೆಗೆ ಅಪ್ಪಳಿಸಲಿದೆ.
ಕಿಚ್ಚ ಸುದೀಪರ ಮುಂದಿನ ಯೋಜನೆ
ಸುದೀಪ್ ನಟಿಸಿರುವ ಕನ್ನಡದ ಬಹುನಿರೀಕ್ಷಿತ ಚಿತ್ರ ರನ್ನ ಇನ್ನೇನು ತೆರೆಗೆ ಅಪ್ಪಳಿಸಬೇಕಿದೆ. ಸೆನ್ಸಾರ್ ಆದ ತಕ್ಷಣ ಚಿತ್ರದ ದಿನಾಂಕವನ್ನು ಘೋಷಿಸುವುದಾಗಿ ಸುದೀಪ್ ಹೇಳಿದ್ದಾರೆ. ಈ ನಡುವೆ ರನ್ನ ನಂತರ ಕಿಚ್ಚ ಸುದೀಪ್ ಎರಡು ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಮೊದಲಿಗೆ ಬಹುಬಾಷಾ ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನದ ಚಿತ್ರವೊಂದರದಲ್ಲಿ ನಟಿಸಲಿದ್ದಾರೆ. ಇದರ ಜತೆಗೆ ಎಸ್ಆರ್ವಿ ಪ್ರೋಡೆಕ್ಷನ್ ನಲ್ಲಿ ನಟಿಸಲಿದ್ದಾರೆ. ಈ ಎರಡು ಚಿತ್ರಗಳು ಜೂನ್ ನಲ್ಲಿ ಸೆಟ್ಟೇರುವ ಸಾಧ್ಯತೆ ಇದೇ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


