'ಮಾಸ್ಟರ್ ಪೀಸ್' ಗೆ ಗೋವಾ ಬಿಸಿಲಿನ ಉರಿ; ಹಿಂದಿರುಗಿದ ಚಿತ್ರತಂಡ
ನಟ್ ಯಶ್ ಹಾಗು ಶಾನ್ವಿ ಶ್ರೀವಾಸ್ತವ ಅಭಿನಯದ 'ಮಾಸ್ಟರ್ ಪೀಸ್' ಚಲನಚಿತ್ರ ತಂಡಕ್ಕೆ ಗೋವಾ ಬಿಸಿಲು ತಡೆಹಾಕಿದೆ.

ಬೆಂಗಳೂರು: ನಟ್ ಯಶ್ ಹಾಗು ಶಾನ್ವಿ ಶ್ರೀವಾಸ್ತವ ಅಭಿನಯದ 'ಮಾಸ್ಟರ್ ಪೀಸ್' ಚಲನಚಿತ್ರ ತಂಡಕ್ಕೆ ಗೋವಾ ಬಿಸಿಲು ತಡೆಹಾಕಿದೆ. ಮೇ ೭ ರಿಂದ ೧೫ ದಿನ ಗೋವಾದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಬೇಕಿತ್ತು. ಆದರ ಏನೂ ಕೆಲಸವಾಗದೆ ಚಿತ್ರತಂಡ ಹಿಂದಿರುಗಿದೆ.
"ನಾವು ಗೋವಾದಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಿದ್ದೆವು ಹಾಗು ಇದಕ್ಕೆ ಸ್ಥಳ ಹುಡುಕಲು ನಾನು ಮೊದಲೇ ಅಲ್ಲಿಗೆ ಹೋಗಿದ್ದೆ. ಆದರೆ ಇಲ್ಲಿನ ಧಗೆ ಎರಡು ನಿಮಿಷದ ಚಿತ್ರೀಕರಣಕ್ಕೂ ಅವಕಾಶ ನೀಡಲಿಲ್ಲ. ನಮಗೆ ಚಿತ್ರೀಕರಣ ರದ್ದುಪಡಿಸಿ ಹಿಂದಿರುಗದೆ ಬೇರೆ ಮಾರ್ಗವೇ ಇರಲಿಲ್ಲ" ಎನ್ನುತ್ತಾರೆ ನಿರ್ದೇಶಕ ಮಂಜು ಮಾಂಡವ್ಯ.
ಬೆಂಗಳೂರಿಗೆ ಹಿಂದಿರುಗಿರುವ ಮಂಜು ಮೇ ೧೫ ರಿಂದ ಚಿತ್ರೀಕರಣ ಮತ್ತೆ ಪ್ರಾರಂಭವಾಗಲಿದೆ ಎಂದಿದ್ದಾರೆ. ಈ ದೃಷ್ಯಾವಳಿಗಳನ್ನು ಚಿತ್ರಿಸಲು ಇತರ ಸ್ಥಳಗಳ ಅನ್ವೇಷಣೆಯಲ್ಲಿದ್ದೇನೆ. "ಗೋವಾ ಚಿತ್ರೀಕರಣದ ಬಗ್ಗೆ ಮರುಚಿಂತನೆ ನಡೆಯಬೇಕಿದೆ ಏಕೆಂದರೆ ಆ ವೇಳೆಗೆ ಬಂಗಳೂರಿನಲ್ಲಿ ನಮ್ಮ ಚಿತ್ರೀಕರಣ ಮುಗಿದು ಮಳೆಗಾಲ ಪ್ರಾರಂಭವಾಗಿರುತ್ತದೆ. ಹೊಸ ಜಾಗಗಳನ್ನು ಹುಡುಕುತ್ತಿದ್ದೇನೆ" ಎಂದಿದ್ದಾರೆ ಮಂಜು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


