ಸಿನಿಮಾ ಸುದ್ದಿ

ನಾನು ಸೋಲನ್ನು ದ್ವೇಷಿಸುತ್ತೇನೆ; ರಾಷ್ಟ್ರೀಯ ಪ್ರಶಸ್ತಿ ಕುರಿತು ಪ್ರಿಯಾಂಕ

ನಾನು ಸೋಲುವುದನ್ನು ದ್ವೇಷಿಸುತ್ತೇನೆ ಆದರೆ ಕ್ವೀನ್ ಚಿತ್ರದ ನಟನೆಗಾಗಿ ಕಂಗನ ರನೌತ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದಿದ್ದರಿಂದ

ನಾನು ಸೋಲನ್ನು ದ್ವೇಷಿಸುತ್ತೇನೆ; ರಾಷ್ಟ್ರೀಯ ಪ್ರಶಸ್ತಿ ಕುರಿತು ಪ್ರಿಯಾಂಕ
ಪ್ರಿಯಾಂಕ ಚೋಪ್ರಾC
Published On :

ಮುಂಬೈ: ನಾನು ಸೋಲುವುದನ್ನು ದ್ವೇಷಿಸುತ್ತೇನೆ ಆದರೆ ಕ್ವೀನ್ ಚಿತ್ರದ ನಟನೆಗಾಗಿ ಕಂಗನ ರನೌತ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದಿದ್ದರಿಂದ ಅದು ತಮ್ಮ ಕೈತಪ್ಪಿ ಹೋಗಿರುವುದಕ್ಕೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ  ಅಷ್ಟೇನೂ ತಲೆಕೆಡಿಸಿಕೊಂಡಿಲ್ಲ.

ಮಂಗಳವಾರ ದೇಶದ ರಾಜಧಾನಿಯಲ್ಲಿ ೬೨ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯಾಗಿದೆ. ಸದ್ಯ ಅಮೆರಿಕಾದಲ್ಲಿರುವ ಪ್ರಿಯಾಂಕ ಕಂಗನಾ ಅವರನ್ನು ಅಭಿನಂದಿಸಿದ್ದಾರೆ.

"ನಾನು ಸೋಲುವುದನ್ನು ದ್ವೇಷಿಸುತ್ತೇನೆ. ಆದರೆ ಈ ವರ್ಷ ನಾನು ಯಾರಿಂದಲಾದರೂ ಹಿನ್ನಡೆ ಅನುಭವಿಸಿದ್ದರೆ ಅದು ನಿಮ್ಮಿಂದಲೇ. ಕಂಗನಾ ರನೌತ್ ಅಭಿನಂದನೆಗಳು. ಏಯ್ ಕ್ವೀನ್!" ಎಂದು ೨೦೦೮ರಲ್ಲಿ ಫ್ಯಾಶನ್ ಸಿನೆಮಾಗೆ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಪ್ರಿಯಾಂಕ ಟ್ವೀಟ್ ಮಾಡಿದ್ದಾರೆ.

ಬಾಕ್ಸಿಂಗ್ ಚಾಂಪಿಯನ್ ಎಂ ಸಿ ಮೇರಿ ಕಾಂ ಅವರ ನಿಜ ಜೀವನ ಆಧಾರಿತ ಸಿನೆಮಾ ಪ್ರಿಯಾಂಕ ನಟನೆಯ 'ಮೇರಿ ಕಾಂ' ಮನರಂಜನೆಯ ವಿಭಾಗದಲ್ಲಿ ೨೦೧೪ ರ ಅತ್ಯುತ್ತಮ ಜನಪ್ರಿಯ ಸಿನೆಮಾ ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.