ಸಿನಿಮಾ ಸುದ್ದಿ

ಹ್ಯಾಪಿ ಬರ್ತ್ ಡೇ ಕಂಗನಾ ರನೌತ್

ತನ್ನ ನಟನಾ ಕೌಶಲತೆಯ ಬಲದ ಮೇಲೆ ಬಾಲಿವುಡ್ಡಿನಲ್ಲಿ ತಳವೂರಿದ ಹಿಮಾಚಲದ ಬೆಡಗಿ ಕಂಗನಾ ರನೌತ್ ಇಂದು

ಹ್ಯಾಪಿ ಬರ್ತ್ ಡೇ ಕಂಗನಾ ರನೌತ್
ಕಂಗನಾ ರನೌತ್
Published On :

ಮುಂಬೈ: ತನ್ನ ನಟನಾ ಕೌಶಲತೆಯ ಬಲದ ಮೇಲೆ ಬಾಲಿವುಡ್ಡಿನಲ್ಲಿ ತಳವೂರಿದ ಹಿಮಾಚಲದ ಬೆಡಗಿ ಕಂಗನಾ ರನೌತ್ ಇಂದು ೨೭ ತುಂಬಿ ೨೮ನೆ ವಸಂತಕ್ಕೆ ಕಾಲಿಟ್ಟಿದ್ದಾರೆ.

ಕಳೆದ ವರ್ಷ ಬಿಡುಗಡೆಯಾದ ವಿಕಾಸ್ ಬಾಹ್ಲ್ ಅವರ 'ಕ್ವೀನ್', ಹಿಂದಿ ಚಿತ್ರೋದ್ಯಮದಲ್ಲಿ ಕಂಗನಾ ಅವರ ಸತ್ವಕ್ಕೆ ಅತ್ಯುತ್ತಮ ತಿರುವು ಕೊಟ್ಟ ಚಿತ್ರ. ವಿಮರ್ಶಕರು ಹಾಡಿ ಹೊಗಳುವಂತೆ ಅಭಿನಯ ನೀಡಿದ ಗುಂಗುರು ಕೂದಲ ಸುಂದರಿಗೆ ಹುಟ್ಟು ಹಬ್ಬದ ಶುಭಾಶಯಗಳು.

'ಗ್ಯಾಂಗ್ಸ್ಟರ್', 'ಲೈಫ್ ಇನ್ ಎ ಮೆಟ್ರೊ', 'ಫ್ಯಾಶನ್', 'ವನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ', 'ತನು ವೆಡ್ಸ್ ಮನು', 'ಕ್ರಿಶ್-೩' ಹೀಗೆ ಬಾಲಿವುಡ್ ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನಟಿ ಕಂಗನಾ.

ಮಧುರ ಭಂಡಾರ್ಕರ್ ಅವರ ಫ್ಯಾಶನ್ ಚಲನಚಿತ್ರದ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ನಟಿ ತನ್ನ ಚೊಚ್ಚಲ ಚಿತ್ರ ಗ್ಯಾಂಸ್ಟರ್ ಮತ್ತು ಇತ್ತೀಚಿನ ಚಿತ್ರ ಕ್ವೀನ್ ಗೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.