ಪಿಕೆ: ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ಕ್ಷಮೆಯಾಚಿಸಿದ ಅಮೀರ್
ಪಿಕೆ ಸಿನೆಮಾದ ನಿರ್ದೇಶಕ ನಿರ್ಮಾಪಕ ನಟ ಯಾರಿಗೂ ಯಾರ ಭಾವನೆಯನ್ನು ನೋಯಿಸುವ ಉದ್ದೇಶ ಇರಲಿಲ್ಲ ಎಂದು ಬಾಲಿವುಡ್ ನಟ ಅಮೀರ್ ಖಾನ್

ಪಿಕೆ ಸಿನೆಮಾದ ನಿರ್ದೇಶಕ ನಿರ್ಮಾಪಕ ನಟ ಯಾರಿಗೂ ಯಾರ ಭಾವನೆಯನ್ನು ನೋಯಿಸುವ ಉದ್ದೇಶ ಇರಲಿಲ್ಲ ಎಂದು ಬಾಲಿವುಡ್ ನಟ ಅಮೀರ್ ಖಾನ್ ನೆನ್ನೆ ಕ್ಷಮೆಯಾಚಿಸಿದ್ದಾರೆ.
ಪಿಕೆ ಸಿನೆಮಾದ ಡಿವಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಮೀರ್ "ಸಿನೆಮಾವನ್ನು ಬಹುತೇಕ ಮಂದಿ ಇಷ್ಟಪಟ್ಟಿದ್ದಾರೆ. ಈ ಸಿನೆಮಾ ಇಂದ ಒಬ್ಬನಿಗೆ ನೋವಾಗಿದ್ದರೆ ಕೂಡ ಅದಕ್ಕೆ ನನಗೆ ಬೇಸರವಿದೆ. ಏಕೆಂದರೆ ಅದು ನಮ್ಮ ಉದ್ದೇಶವಾಗಿರಲಿಲ್ಲ. ಇದು ಪ್ರಮುಖ ವಿಷಯ ಆದುದರಿಂದ ಹೇಳುತ್ತಿದ್ದೇನೆ. ಜನರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ" ಎಂದಿದ್ದಾರೆ.
ಬೇರೆ ಗ್ರಹದಿಂದ ಅನ್ಯಜೀವಿಯಾಗಿ ಬರುವ ಅಮೀರ್ ಖಾನ್, ದೇವರನ್ನು ಹುಡುಕುವ ನೆಪದಲ್ಲಿ ಹಲವು ಧರ್ಮಗಳ ರೀತಿ ರಿವಾಜುಗಳನ್ನು ಮತ್ತು ದೇವಮಾನವರನ್ನು ಸಿನೆಮಾದಲ್ಲಿ ಕುಚೋದ್ಯ ಮಾಡುತ್ತಾರೆ. ಇದರಿಂದ ಕುಪಿತಗೊಂಡಿದ್ದ ಹಲವಾರು ಹಿಂದು ಸಂಘಟನೆಗಳು ಪ್ರತಿಭಟಿಸಿದ್ದಲ್ಲದೆ, ಸಿನೆಮಾದ ನಿಷೇಧಕ್ಕೆ ಆಗ್ರಹಿಸಿದ್ದರು. ಹೀಗಿದ್ದು ಸಿನೆಮಾ ಗಲ್ಲಾಪೆಟ್ಟಿಯಲ್ಲಿ ಹಣ ದೋಚಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


