ಸಿನಿಮಾ ಸುದ್ದಿ

'ಮತ್ತೆ ಶ್' ಸದ್ಯದಲ್ಲೆ ತೆರೆಗೆ

'ಮತ್ತೆ ಶ್' ಸದ್ಯದಲ್ಲೆ ತೆರೆಗೆ
ಸುಷ್ಮ
Published On :

ಶ್ ಹೆಸರಿನ ಎಷ್ಟು ಚಿತ್ರಗಳು ತೆರೆಗೆ ಸಿದ್ದವಾಗುತ್ತಿದ್ದೇಯೋ ಗೊತ್ತಿಲ್ಲ. ಆದರೆ ಇಲ್ಲೊಬ್ಬ ನಿರ್ಮಾಪಕರು ಯಾವುದೇ ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಮುಗಿಸಿ 'ಮತ್ತೆ ಶ್' ಸದ್ಯದಲ್ಲೆ ತೆರೆಗೆ ತರಲು ನಿರ್ಧರಿಸಿದ್ದಾರೆ.

ಎಸ್.ಆರ್.ಟಾಕೀಸ್ ಲಾಂಛನದಡಿಯಲ್ಲಿ ದಯಾನಂದ್ ಮಠ್ಪತಿ(ಚಿಕ್ಕೋಡಿ) ಅವರು ನಿರ್ಮಿಸುತ್ತಿರುವ ಮತ್ತೆ ಶ್ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಉಳಿದ ಕೆಲಸ(ಡಬ್ಬಿಂಗ್, ರೀರೆಕಾರ್ಡಿಂಗ್)ಈಗ ಭರದಿಂದ ಸಾಗಿದೆ.

ಚಿತ್ರಕ್ಕೆ ಗಾಲಿ ಲಕ್ಕಿ ಸಂಭಾಷಣೆ, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಸಾಹಿತ್ಯ, ಡ್ಯಾನಿಯಲ್ ಸಂಗೀತ, ಕುಂಗ್ಫು ಚಂದ್ರುರವರ ಸಾಹಸ ಗಣೇಶ್ ನೃತ್ಯ, ಬಾಬು ಕಲೆ, ಕುಮಾರ್ ಸಂಕಲನವಿದ್ದು, ಚಿತ್ರದ ಕಥೆ, ಚಿತ್ರಕಥೆ ಛಾಯಾಗ್ರಹಣದೊಂದಿಗೆ ವೆಸ್ಲೀ ಬ್ರೈನ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ತಾರಾಗಣದಲ್ಲಿ 6-5 = 2 ಖ್ಯಾತಿಯ ವಿಜಯ್ ಚಂಡೂರ್, ಶೃತಿ, ಸುಷ್ಮ, ಖ್ಯಾತ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಪುತ್ರ ರಾಮ್ ಮುಂತಾದವರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.