ಸಿನಿಮಾ ಸುದ್ದಿ

ಸನ್ನಿ ಲಿಯೋನ್ ಜೊತೆ ಹೆಜ್ಜೆ ಹಾಕಲಿದ್ದಾರೆ ಮಜಾ ಟಾಕಿಸ್ ಸೃಜನ್

ಇಂದ್ರಜಿತ್ ಲಂಕೇಶ್ ಅವರ ಮುಂದಿನ ಸಿನೆಮಾ 'ಲವ್ ಯು ಆಲಿಯಾ'ದ ತಾರಾವರ್ಗ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಸನ್ನಿ ಲಿಯೋನ್ ಸಿನೆಮಾದಲ್ಲಿ ಹೆಜ್ಜೆ

ಸನ್ನಿ ಲಿಯೋನ್ ಜೊತೆ ಹೆಜ್ಜೆ ಹಾಕಲಿದ್ದಾರೆ ಮಜಾ ಟಾಕಿಸ್ ಸೃಜನ್
ಸೃಜನ್ ಲೋಕೇಶ್
Published On :

ಬೆಂಗಳೂರು: ಇಂದ್ರಜಿತ್ ಲಂಕೇಶ್ ಅವರ ಮುಂದಿನ ಸಿನೆಮಾ 'ಲವ್ ಯು ಆಲಿಯಾ'ದ ತಾರಾವರ್ಗ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಸನ್ನಿ ಲಿಯೋನ್ ಸಿನೆಮಾದಲ್ಲಿ ಹೆಜ್ಜೆ ಹಾಲಿದ್ದಾಳೆ ಎಂದು ಈ ಹಿಂದೆ ಇಂದ್ರಜಿತ್ ತಿಳಿಸಿದ್ದರು. ಈಗ ಅವರ ಜೊತೆಗೆ ಹೆಜ್ಜೆ ಹಾಕಲು ಸಂಗಾತಿ ಬೇಕಲ್ಲವೇ?

ಅದಕ್ಕಾಗಿಯೇ ಲಂಕೇಶ್ ಅವರು ಕಿರುತೆರೆ ಕಾಮಿಡಿ ಶೋ 'ಮಜಾ ಟಾಕೀಸ್'ನ ನಿರೂಪಕ ಸೃಜನ್ ಲೋಕೇಶ್ ಅವರನ್ನು ಆಯ್ಕೆ ಮಾಡಿದ್ದಾರಂತೆ. ಜಿಮ್ ನಲ್ಲಿ ತಮ್ಮ ದೇಹವನ್ನು ಹುರಿಗೊಳಿಸಿ ಸಿಕ್ಸ್-ಪ್ಯಾಕ್ ಬೆಳೆಸಿಕೊಂಡಿರುವ ಸೃಜನ್ ಸನ್ನಿ ಅವರಿಗೆ ಸಕತ್ ಸಂಗಾತಿಯಂತೆ. ಇದು ನಿರ್ದೇಶಕ ಲಂಕೇಶ್, ನಟ ಸೃಜನ್ ಅವರ ಹುಟ್ಟು ಹಬ್ಬಕ್ಕೆ ನೀಡಿರುವ ಉಡುಗೊರೆ. ಅಂದಹಾಗೆ ಸೃಜನ್ ಅವರ ಹುಟ್ಟುಹಬ್ಬ ಬರುವ ಭಾನುವಾರದಂದು.

ಸೃಜನ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಕಾರಣ ಹೇಳುವ ಲಂಕೇಶ್ "ನಮ್ಮಿಬ್ಬರದ್ದು ಸುಧೀರ್ಘ ಒಡನಾಟ. ನಮ್ಮ ತಂದೆ ಲಂಕೇಶ್ ಮತ್ತು ಅವರ ತಂದೆ ಲೋಕೇಶ್ 'ಎಲ್ಲಿಂದಲೋ ಬಂದವರು' ಸಿನೆಮಾದಲ್ಲಿ ನಿರ್ದೇಶಕ-ನಟನಾಗಿ ಕೆಲಸ ಮಾಡಿದ್ದಾರೆ. ಇಂದು ಮಜಾ ಟಾಕೀಸ್ ನಲ್ಲಿ ನಾನು ಸರ್ಜನ್ ಒಡನಾಡಿ. 'ಲವ್ ಯು ಆಲಿಯಾ' ಸಿನೆಮಾಗೆ ಸೃಜನ್ ಅವರನ್ನು ಕರೆತರುವ ಮೂಲಕ ನಮ್ಮ ಸಂಬಂಧವನ್ನು ವಿಸ್ತರಿಸಿದ್ದೇವೆ" ಎನ್ನುತ್ತಾರೆ.

ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಸೃಜನ್ ದೇಹದಾಢ್ಯದ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿದ್ದಾರಂತೆ. ಅಲ್ಲದೆ ಕಿರುತೆರೆಯ ಕಾಮಿಡಿ ಶೋನಲ್ಲಿ ಅತಿ ಹೆಚ್ಚು ಜನಪ್ರಿಯರಾಗಿದ್ದಾರಂತೆ. ಸನ್ನಿ ಜೊತೆಗಿನ ಕುಣಿತದ ಚಿತ್ರೀಕರಣ ಜುಲೈ ೨೧ಕ್ಕೆ ನಿಯೋಜಿತವಾಗಿದೆ. ಹಾಗೆಯೆ ಸೃಜನ ಅವರ ನಿರ್ಮಾಣ ಸಂಸ್ಥೆಯಡಿ ಇಂದ್ರಜಿತ್ ಲಂಕೇಶ್ ಸಿನೆಮಾವೊಂದನ್ನು ನಿರ್ದೇಶಿಸಲಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.