ಸಿನಿಮಾ ಸುದ್ದಿ

'ಹಮ್ ಆಪ್ ಕೆ ಹೈ ಕೌನ್' ದ್ವಿತೀಯ ಭಾಗದಲ್ಲಿ ಪ್ರೇಮ್ ಪಾತ್ರಕ್ಕೆ ರಣಬೀರ್

'ಹಮ್ ಆಪ್ ಕೆ ಹೈ ಕೌನ್', 'ಹಮ್ ಸಾಥ್ ಸಾಥ್ ಹೈ' ಮತ್ತು 'ವಿವಾಹ್' ಇಂತಹ ಜನಪ್ರಿಯ ಸಿನೆಮಾಗಳನ್ನು ನಿರ್ದೇಶಿಸಿದ ಸೂರಜ್ ಬರ್ಜತ್ಯ ಈಗ...

'ಹಮ್ ಆಪ್ ಕೆ ಹೈ ಕೌನ್' ದ್ವಿತೀಯ ಭಾಗದಲ್ಲಿ ಪ್ರೇಮ್ ಪಾತ್ರಕ್ಕೆ ರಣಬೀರ್
ಮೂಲ 'ಹಮ್ ಆಪ್ ಕೆ ಹೈ ಕೌನ್' ಚಿತ್ರದ ಹಾಡಿನ ಒಂದು ದೃಶ್ಯ
Published On :

'ಹಮ್ ಆಪ್ ಕೆ ಹೈ ಕೌನ್', 'ಹಮ್ ಸಾಥ್ ಸಾಥ್ ಹೈ' ಮತ್ತು 'ವಿವಾಹ್' ಇಂತಹ ಜನಪ್ರಿಯ ಸಿನೆಮಾಗಳನ್ನು ನಿರ್ದೇಶಿಸಿದ ಸೂರಜ್ ಬರ್ಜತ್ಯ ಈಗ ಸಲ್ಮಾನ್ ಖಾನ್ ಮತ್ತು ಸೋನಮ್ ಕಪೂರ್ ಅವರ ನಟನೆಯ 'ಪ್ರೇಮ್ ರತನ್ ಧನ ಪಾಯೋ' ಸಿನೆಮಾ ಮಾಡುತ್ತಿರುವುದು ತಿಳಿದ ವಿಷಯವೇ. ಆದರೆ ಆಗ ಮೂಲಗಳ ಪ್ರಕಾರ ೧೯೯೪ ರ ಸೂಪರ್ ಹಿಟ್ ಚಿತ್ರ 'ಹಮ್ ಆಪ್ ಕೆ ಹೈ ಕೌನ್' ಸಿನೆಮಾದ ದ್ವಿತೀಯ ಭಾಗವನ್ನು ನಿರ್ದೇಶಿಸಲು ಬರ್ಜತ್ಯ ಸಿದ್ಧರಾಗುತ್ತಿದ್ದಾರೆ ಮತ್ತು ಅದರಲ್ಲಿ ನಾಯಕ ನಟನಾಗಿ ರಣಬೀರ್ ಕಪೂರ್ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ನಿಶಾ(ಮಾಧುರಿ ದೀಕ್ಷಿತ್) ಮತ್ತು ಪ್ರೇಮ್(ಸಲ್ಮಾನ್ ಖಾನ್) ಮದುವೆಯೊಂದಿಗೆ ಮುಕ್ತಾಯವಾಗಿದ್ದ ಸಿನೆಮಾ ಈಗ ದ್ವಿತೀಯ ಭಾಗದಲ್ಲಿ ಮುಂದುವರೆಯಲಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ "ಹಿಂದಿನ ಸಿನೆಮಾದ ಕಥೆಯ ಮುಕ್ತಾಯದಿಂದ ದ್ವಿತೀಯ ಭಾಗ ಪ್ರಾರಂಭವಾಗಲಿದೆ. ಬಜರ್ತ್ಯ ಹೊಸ ಯೋಜನೆಯ ಮೇಲೆ ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಿದ್ದಾರೆ. ಆದರೆ ವದಂತಿಗಳ ವಿರುದ್ಧವಾಗಿ ಸಲ್ಮಾನ್ ನಾಯಕ ನಟನಾಗಿ ಅಭಿನಯಿಸುವುದಿಲ್ಲ ಬದಲಾಗಿ ರಣಬೀರ್ ಇರುತ್ತಾರೆ. ತಾರಾಗಣದ ಆಯ್ಕೆಯ ನಂತರ ಚಿತ್ರೀಕರಣ ಪೂರ್ವ ಕೆಲಸಗಳನ್ನು ಬಜರ್ತ್ಯ ಪ್ರಾರಂಭಿಸಲಿದ್ದಾರೆ" ಎಂದು ತಿಳಿದುಬಂದಿದೆ.

ಆದರೆ ನಿಶಾ(ಮಾಧುರಿ ದೀಕ್ಷಿತ್ ನಿರ್ವಹಿಸಿದ್ದ ಪಾತ್ರ) ಪಾತ್ರಕ್ಕೆ ಯಾರು ಆಯ್ಕೆಯಾಗಿದ್ದಾರೆ ಎಂಬುದು ಇನ್ನು ತಿಳಿದುಬಂದಿಲ್ಲ. ಬಜರ್ತ್ಯ ಅವರ ಸದ್ಯದ ಯೋಜನೆ ಬಿಡುಗಡೆ ಕಂಡ ನಂತರವೇ 'ಹಮ್ ಆಪ್ ಕೆ ಹೈ ಕೌನ್' ದ್ವಿತೀಯ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.