ಸಿನಿಮಾ ಸುದ್ದಿ

ದಾಖಲೆಗಳನ್ನು ನುಚ್ಚು ನೂರು ಮಾಡಿದ ಡೈನೋಸಾರ್ ಗಳು

ಜಾಗತಿಕವಾಗಿ ಗಲ್ಲಾಪೆಟ್ಟಿಯಲ್ಲಿ ೧ ಬಿಲಿಯನ್ ಡಾಲರ್ ಗಳನ್ನು ಅತಿ ವೇಗವಾಗಿ ಗಳಿಸುವ ಸಿನೆಮಾ 'ಜುರಾಸಿಕ್ ವರ್ಲ್ಡ್' ಆಗಲಿದೆ. ಯೂನಿವರ್ಸಲ್ ಪಿಕ್ಚರ್ಸ್

ದಾಖಲೆಗಳನ್ನು ನುಚ್ಚು ನೂರು ಮಾಡಿದ ಡೈನೋಸಾರ್ ಗಳು
ಜುರಾಸಿಕ್ ವರ್ಲ್ಡ್ ಸಿನೆಮಾ ಸ್ಟಿಲ್
Published On :

ಲಾಸ್ ಏಂಜಲೀಸ್: ಜಾಗತಿಕವಾಗಿ ಗಲ್ಲಾಪೆಟ್ಟಿಯಲ್ಲಿ ೧ ಬಿಲಿಯನ್ ಡಾಲರ್ ಗಳನ್ನು ಅತಿ ವೇಗವಾಗಿ ಗಳಿಸುವ ಸಿನೆಮಾ 'ಜುರಾಸಿಕ್ ವರ್ಲ್ಡ್' ಆಗಲಿದೆ. ಯೂನಿವರ್ಸಲ್ ಪಿಕ್ಚರ್ಸ್ ನಿರ್ಮಿಸಿರುವ ಈ ಸಿನೆಮಾ ಬಿಡುಗಡೆಯ ವಾರವೇ ಅತಿ ಹೆಚ್ಚಿನ ಗಳಿಕೆ ಕಂಡಿತ್ತು.

ಕ್ರಿಸ್ ಪ್ರ್ಯಾಟ್, ಬ್ರೈಸ್ ದಲ್ಲಾ ಹಾವರ್ಡ್, ಇರ್ಫಾನ್ ಖಾನ್ ನಟನೆಯ ಬಿಡುಗಡೆಯ ೧೩ ದಿನಗಳಲ್ಲೇ ಈ ದಾಖಲೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.

ಈ ಹಿಂದಿನ ದಾಖಲೆ ಯೂನಿವರ್ಸಲ್ ಸಿನೆಮಾ 'ಫ್ಯೂರಿಯಸ್ ೭'ದ್ದೆ ಆಗಿದೆ. ಆ ಆಕ್ಷನ್ ಸಿನೆಮಾ ಏಪ್ರಿಲ್ ನಲ್ಲಿ ಬಿಡುಗಡೆ ಕಂಡು ೧೭ ದಿನಗಳಲ್ಲಿ ೧ ಬಿಲಿಯನ್ ಡಾಲರ್ ಬಾಚಿತ್ತು.

ಇದೇ ನಿರ್ಮಾಣ ಸಂಸ್ಥೆಯ ಫೆಬ್ರವರಿಯಲ್ಲಿ ಬಿಡುಗಡೆ ಕಂಡಿದ್ದ 'ಫಿಫ್ಟಿ ಶೇಡ್ಸ್ ಆಫ್ ಗ್ರೆ' ಕೂಡ ಒಳ್ಳೆಯ ಹಣ ಗಳಿಸಿತ್ತು. ಬೇಸಿಗೆಯಲ್ಲಿ ಅನಿಮೇಶನ್ ಸಿನೆಮಾ 'ಮಿನಿಯನ್ಸ್' ಮತ್ತು 'ಟೆಡ್-೨' ಬಿಡುಗಡೆಗೆ ಕಾಯುತ್ತಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.