ಸಿನಿಮಾ ಸುದ್ದಿ

ಸೋರಿಕೆಯಾಗಿದೆ ಬಾಹುಬಲಿ ಚಿತ್ರಕಥೆ..!

ಬಾಹುಬಲಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ದೊರೆಯುತ್ತಿದ್ದಂತೆಯೇ ಇತ್ತ ಬಾಹುಬಲಿ ಕಥೆ ಸೋರಿಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸೋರಿಕೆಯಾಗಿದೆ ಬಾಹುಬಲಿ ಚಿತ್ರಕಥೆ..!
ಬಾಹುಬಲಿ ಚಿತ್ರದ ಪೋಸ್ಟರ್
Published On :

ಹೈದರಾಬಾದ್: ಬಾಹುಬಲಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ದೊರೆಯುತ್ತಿದ್ದಂತೆಯೇ ಇತ್ತ ಬಾಹುಬಲಿ ಕಥೆ ಸೋರಿಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಟಾಲಿವುಡ್ ಮೂಲಗಳ ಪ್ರಕಾರ ಬಾಹುಬಲಿ ಕಥೆ ಸೋರಿಕೆಯಾಗಿದ್ದು, ಚಿತ್ರವು ಐತಿಹಾಸಿಕ ಕಥೆಯನ್ನಾಧರಿಸಿದೆ ಎಂದು ತಿಳಿದುಬಂದಿದೆ. ಅಣ್ಣನ ವಿರುದ್ಧ ಯುದ್ಧಮಾಡಿ ಗೆದ್ದರೂ ವೈರಾಗಿಯಾದ ಅದೇ ಬಾಹುಬಲಿ ಕಥೆಗೆ ರಾಜಮೌಳಿ ಬಾಹುಬಲಿ ಕಥೆಗಳು ಒಂದೇ ಸಮನಾಗಿದೆ ಎಂದು ಹೇಳಲಾಗುತ್ತಿದೆ.

ರಾಜಮೌಳಿ ನಿರ್ದೇಶನದ ಬಾಹುಬಲಿ ಇಬ್ಬರು ರಾಜವಂಶದ ಸಹೋದರರ ಕಥೆಯಾಗಿದ್ದು, ಅಣ್ಣ ಬಾಹುಬಲಿ ಪಾತ್ರದಲ್ಲಿ ನಟ ಪ್ರಭಾಸ್ ನಟಿಸಿದ್ದು, ತಮ್ಮ ಬಲ್ಲಾಳದೇವನ ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ಅಣ್ಣನಾದ ಬಾಹುಬಲಿಗೆ ತಂದೆ ಪಟ್ಟಾಭಿಷೇಕ ಮಾಡಿದಾಗ ಅಧಿಕಾರದ ವ್ಯಾಮೋಹಕ್ಕೆ ಒಳಗಾಗುವ ಬಲ್ಲಾಳದೇವ ಕುತಂತ್ರದಿಂದ ತನ್ನ ಅಣ್ಣನನ್ನೇ ಕೊಲ್ಲುತಾನೆ. ಬಳಿಕ ಬಾಹುಬಲಿ ಕುಟುಂಬ ಕೂಡ ಅಜ್ಞಾತವಾಗುತ್ತದೆ. ಆತನ ಮಗ ಶಿವುಡುಗೆ ತನ್ನ ಕಥೆ ತಿಳಿದು ತನ್ನ ಚಿಕ್ಕಪ್ಪನ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದೇ ಬಾಹುಬಲಿ ಚಿತ್ರದ ತಿರುಳು ಎಂದು ಟಾಲಿವುಡ್ ಮೂಲಗಳು ಹೇಳಿವೆ.

ಆದರೆ ಪ್ರಸ್ತುತ ಚಿತ್ರದ ಕಥೆ ಲೀಕ್ ಆಗಿರುವ ಕುರಿತು ಬಾಹುಬಲಿ ಚಿತ್ರತಂಡವಾಗಲಿ ಅಥವಾ ನಿರ್ದೇಶಕ ರಾಜಮೌಳಿಯಾಗಲೀ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಇದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದ್ದು, ಚಿತ್ರ ಬಿಡುಗಡೆಯಾದ ಬಳಿಕವೇ ಇದಕ್ಕೆ ಉತ್ತರ ದೊರೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.