ಸಿನಿಮಾ ಸುದ್ದಿ

'ಕಿಲ್ಲಿಂಗ್ ವೀರಪ್ಪನ್' ಥೀಮ್ ಸಂಗೀತ ಬಿಡುಗಡೆ

ನಾಲ್ಕು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ಥೀಮ್ ಮ್ಯೂಸಿಕ್ ಅನ್ನು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ...

'ಕಿಲ್ಲಿಂಗ್ ವೀರಪ್ಪನ್' ಥೀಮ್ ಸಂಗೀತ ಬಿಡುಗಡೆ
'ಕಿಲ್ಲಿಂಗ್ ವೀರಪ್ಪನ್' ಸಿನೆಮಾ ಭಿತ್ತಿಚಿತ್ರ
Published On :

ಬೆಂಗಳೂರು: ನಾಲ್ಕು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ಥೀಮ್ ಮ್ಯೂಸಿಕ್ ಅನ್ನು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ನಟ ವಿ ರವಿಚಂದ್ರನ್ ಬಿಡುಗಡೆ ಮಾಡಿದ್ದಾರೆ. ಸಿನೆಮಾದ ನಾಯಕ ನಟ ಡಾ. ಶಿವರಾಜ್ ಕುಮಾರ್, ಹಾಗು ಚಿತ್ರದಲ್ಲಿ ನಟಿಸುತ್ತಿರುವ ಪರುಲ್ ಯಾದವ್, ಯಜ್ಞಾ ಶೆಟ್ಟಿ, ನಿರ್ದೇಶಕ ರಾಮಗೋಪಾಲ ವರ್ಮಾ ಮತ್ತಿತರ ಚಿತ್ರರಂಗದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

"ನನಗೆ ಗೊತ್ತಿಲ್ಲದ ಭಾಷೆಯಲ್ಲಿ ಸಿನೆಮಾ ಮಾಡುವುದಕ್ಕೆ ಒಂದು ರೀತಿಯ ಭಯ ಇತ್ತು. ಅದಕ್ಕೆ ಇಲ್ಲಿಯವರೆಗೆ ಕನ್ನಡ ಸಿನೆಮಾಗಳನ್ನು ನಿರ್ದೇಶಿಸಿಲ್ಲ. ಆದ್ರೆ ವೀರಪ್ಪನ್ ವಿಷಯ ಎಂತಹವರನ್ನೂ ಮೋಡಿಗೊಳಿಸುತ್ತದೆ. ಅವನೊಬ್ಬ ವಿಭಿನ್ನ ಮನುಷ್ಯ. ಇವನ ಬಗ್ಗೆ ಸಿನೆಮಾ ಮಾಡಲೇಬೇಕು ಎನ್ನಿಸಿತ್ತು. ಹಾಗು ವೀರಪ್ಪನ್ ನಿಂದ ಹೆಚ್ಚು ಶೋಷಣೆಗೊಳಗಾಗಿರುವವರು ಕರ್ನಾಟಕದವರಾಗಿರುವುದರಿಂದ ಕನ್ನಡದಲ್ಲಿ ಸಿನೆಮಾ ಮಾಡಲೇಬೇಕು.

"ನೀವು ಒಳಗಿನವರಾಗಿ ವೀರಪ್ಪನ್ ಕಥೆ ಗೊತ್ತಿರುತ್ತದೆ. ನಾನು ಹೊರಗಿನವನಾಗಿ ಈ ಕಥೆಯನ್ನು ವಿಶಿಷ್ಟವಾಗಿ ಹೇಳಲಿದ್ದೇನೆ. ಇಲ್ಲಿಯವರೆಗೂ ವೀರಪ್ಪನ್ ಬಗ್ಗೆ ಸಿನೆಮಾಗಳು ಬಂದಿದ್ದರೂ, ಇಲ್ಲಿಯವರೆಗೂ ಯಾರೂ ಹೇಳದಿರುವ ಸಂಗತಿಯೊಂದನ್ನು ಸಿನೆಮಾದಲ್ಲಿ ಹೇಳಲಿದ್ದೇನೆ" ಎಂದಿದ್ದಾರೆ ನಿರ್ದೇಶಕ ರಾಮ ಗೋಪಾಲ ವರ್ಮ.

ಚಿತ್ರೀಕರಣ ಇಂದಿನಿಂದ ಪ್ರಾಂಭವಾಗಲಿದೆ. ಕನ್ನಡ, ಹಿಂದಿಯಲ್ಲಿ ಸಿನೆಮಾ ನಿರ್ಮಾಣಗೊಳ್ಳಲಿದ್ದು, ತೆಲುಗು ಮತ್ತು ತಮಿಳಿಗೆ ಡಬ್ ಆಗಲಿದೆ. ಮೊದಲ ಬಾರಿಗೆ ಹಿಂದಿ ಸಿನೆಮಾದಲ್ಲೂ ನಟಿಸುತ್ತಿರುವ ಶಿವರಾಜ್ ಕುಮಾರ್ ಆರ್ ಜಿ ವಿ ಅವರ ಜೊತೆ ಕೆಲಸ ಮಾಡಲು ಹರ್ಷ ವ್ಯಕ್ತಪಡಿಸಿದ್ದು, ತನ್ನ ಕೈಲಾದಷ್ಟು ಚೆನ್ನಾಗಿ ನಟಿಸುವೆ ಎಂದಿದ್ದಾರೆ.

ಇಲ್ಲಿದೆ ಸಿನೆಮಾದ 'ಥೀಮ್ ಸಂಗೀತ'. ಆಲಿಸಿ. ಆನಂದಿಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.