ನಟ ಸನ್ನಿ ಡಿಯೋಲ್ ವಿರುದ್ಧ ದೂರು ದಾಖಲು
ಬಾಲಿವುಡ್ ಪ್ರಸಿದ್ಧ ನಟ ಸನ್ನಿ ಡಿಯೋಲ್ ಪ್ರಧಾನ ಭೂಮಿಕೆಯಲ್ಲಿ ನಟಿಸಿರುವ ಮುಂದಿನ ಚಿತ್ರ ಮೊಹಲ್ಲಾ ಅಸ್ಸಿ ಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ...

ಲಕ್ನೋ: ಬಾಲಿವುಡ್ ಪ್ರಸಿದ್ಧ ನಟ ಸನ್ನಿ ಡಿಯೋಲ್ ಪ್ರಧಾನ ಭೂಮಿಕೆಯಲ್ಲಿ ನಟಿಸಿರುವ ಮುಂದಿನ ಚಿತ್ರ ಮೊಹಲ್ಲಾ ಅಸ್ಸಿ ಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಸನ್ನಿ ಡಿಯೋಲ್ ಹಾಗೂ ನಿರ್ದೇಶಕ ಚಂದ್ರ ಪ್ರಕಾಶ್ ದ್ವಿವೇದಿ ವಿರುದ್ಧ ದೂರು ದಾಖಲಾಗಿದೆ.
ಸರ್ವಜನ ಜಾಗೃತಿ ಸಂಸ್ಥೆ ಬೇಲುಪುರ್ ಪೊಲೀಸ್ ಠಾಣೆಯಲ್ಲಿ ನಟ ಹಾಗೂ ನಿರ್ದೇಶಕರ ವಿರುದ್ಧ ದೂರು ದಾಖಲಿಸಿ, ಚಿತ್ರದಲ್ಲಿ ವಾರಣಾಸಿಯನ್ನು ನಿಕೃಷ್ಟವಾಗಿ ತೋರಿಸಲಾಗಿದೆ. ಮತ್ತು ನೈತಿಕತೆಯನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದೆ. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸಂಘಟನೆ ತಿಳಿಸಿದೆ.
ಲೇಖಕ ಕಾಶಿನಾಥ್ ಸಿಂಗ್ ಅವರ ಕಾಶಿ ಕಾ ಅಸ್ಸಿ ಎಂಬ ಕಾದಂಬರಿ ಆಧರಿಸಿ ಸಿನಿಮಾ ತಯಾರಿಸಲಾಗುತ್ತಿದ್ದು, ಚಿತ್ರದಲ್ಲಿ ರವಿ ಕಿಶನ್ ಹಾಗೂ ಸಾಕ್ಷಿ ತನ್ವಾರ್ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಸನ್ನಿ ಡಿಯೋಲ್ ಸಾಂಪ್ರಾದಾಯಿಕ ಕುಟಂಬದ ಸಂಸ್ಕೃತ ಶಿಕ್ಷಕನ ಪಾತ್ರ ನಿರ್ವಹಿಸಿದ್ದಾರೆ. ಮಡಿವಂತ ಕುಟುಂಬದ ಸಂಸ್ಕೃತ ಪಂಡಿತನ ಪತ್ನಿಯಾಗಿ ಸಾಕ್ಷಿ ತನ್ವಾರ್ ನಟಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


