ರಾಗಿಣಿ ಜೊತೆ ಕೆಲಸ ಮಾಡುವುದಿಲ್ಲ: ನಿರ್ದೇಶಕ ರಾಜು
'ನಾಟಿ ಕೋಳಿ' ಸುತ್ತ ಇದ್ದ ವಿವಾದಗಳು ಒಂದು ತಿಂಗಳು ಕಳೆದರೂ ಬಗೆಹರಿಯುವ ಯಾವುದೇ ಲಕ್ಷಣಗಳಿಲ್ಲ. ಈಗ ಅಂತಿಮವಾಗಿ ನಿರ್ದೇಶಕ ಶ್ರೀನಿವಾಸ ರಾಜು

ಬೆಂಗಳೂರು: 'ನಾಟಿ ಕೋಳಿ' ಸುತ್ತ ಇದ್ದ ವಿವಾದಗಳು ಒಂದು ತಿಂಗಳು ಕಳೆದರೂ ಬಗೆಹರಿಯುವ ಯಾವುದೇ ಲಕ್ಷಣಗಳಿಲ್ಲ. ಈಗ ಅಂತಿಮವಾಗಿ ನಿರ್ದೇಶಕ ಶ್ರೀನಿವಾಸ ರಾಜು ಅವರು ನಟಿ ರಾಗಿಣಿ ದ್ವಿವೇದಿ ಅವರಿಲ್ಲದೆ ಸಿನೆಮಾ ಚಿತ್ರೀಕರಣ ಮುಂದುವರೆಸಲು ನಿರ್ಧರಿಸಿದ್ದಾರೆ.
ನಟಿ ತನ್ನ ಬಗ್ಗೆ ಸಲಿಗೆ ತೆಗೆದುಕೊಂಡಿರುವುದಕ್ಕೆ ಕುಪಿತರಾಗಿರುವ ರಾಜು, ನಿರ್ಮಾಪಕ ವೆಂಕಟ್ ಅವರನ್ನು ಭೇಟಿ ಮಾಡಿದ್ದಾರೆ. ರಾಗಿಣಿ ಅವರು ನಟಿಸಲು ಹಲವಾರು ಷರತ್ತುಗಳನ್ನು ವಿಧಿಸಿದ್ದಾರೆ ಎಂದು ವೆಂಕಟ್ ತಿಳಿಸಿದರು. ಅವರಿಗೆ ಪ್ರಚಾರ ವಿನ್ಯಾಸದ ಮೇಲೆ ನಿಯಂತ್ರಣ ಬೇಕಂತೆ. ಇದು ಸಾಧ್ಯವಿಲ್ಲ. ಆದುದರಿಂದ ನಾನು ಅವರ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನಿರ್ಮಾಪಕರಿಗೆ ತಿಳಿಸಿದ್ದೇನೆ ಎನ್ನುತ್ತಾರೆ ರಾಜು.
ನನ್ನ ನಿರ್ದೇಶನ ಸಾಮರ್ಥ್ಯದ ಬಗ್ಗೆ ಅವರಿಗೆ ಸಂದೇಹಗಳಿವೆಯಂತೆ. ಇದು ಒರಟಾಗಿ ಕೇಳಬಹುದು ಆದರೆ ಅವರು ಕೆಲವ ಒಬ್ಬ ನಟಿ. ಅವರಿಗೆ ಪ್ರಚಾರದ ಮೇಲೆ ನಿಯಂತ್ರಣ ನಾನು ಬಿಟ್ಟುಕೊಡುತ್ತೇನೆ ಎಂದು ಹೇಗೆ ತಿಳಿದರೋ? ನನಗೆ ಬೇರೆ ನಟಿಯನ್ನು ಹಾಕಿಕೊಂಡು ಸಿನೆಮಾ ಮಾಡುವುದು ಗೊತ್ತು. ನಾಟಿ ಕೋಳಿ ಸಿನೆಮಾ ಬರೆದು, ಚಿತ್ರತಂಡವನ್ನೆಲ್ಲಾ ಒಗ್ಗೂಡಿಸಿದ ಮೇಲೆ ನನಗೆ ಫಲ ಸಿಗುವುದು ಹೀಗೆ. ವೆಂಕಟ್ ಅವರು ಮನವಿ ಮಾಡಿದ್ದಕ್ಕೆ ರಾಗಿಣಿ ಅವರಿಗೆ ಒಂದು ವಾರದ ಹಿಂದೆ ಮತ್ತೆ ಸ್ಕ್ರಿಪ್ಟ್ ಓದಿದ್ದೇನೆ. ಆದರೂ ಅವರು ತೊಂದರೆಗಳನ್ನು ಸೃಷ್ಟಿಸುತ್ತಿದ್ದಾರೆ ಎನ್ನುತ್ತಾರೆ ರಾಜು.
ಈಗ ನೂತನ ನಾಯಕ ನಟಿಯ ಶೋಧನೆಯಲ್ಲಿದ್ದರೆ ಶ್ರೀನಿವಾಸ್. "ಮೊದಲ ದಿನದ ಫೋಟೊ ಶೂಟ್ ನಿಂದಲೂ ಎಲ್ಲ ತೊಂದರೆಗಳಿಗೆ ರಾಗಿಣಿಯವರೇ ಕಾರಣ ಎಂದು ತಿಳಿದಿತ್ತು. ಆದರೆ ಅವರನ್ನು ರಕ್ಷಿಸಲು ಬಹಳ ಪ್ರಯತ್ನ ಪಟ್ಟೆ, ಇನ್ನು ಸಾಧ್ಯವಿಲ್ಲ. ಅವರಿಲ್ಲದೆ ಈ ಸಿನೆಮಾ ಸಾಧ್ಯವಿಲ್ಲ ಎಂದು ತಿಳಿದರೆ ಅವರ ತಪ್ಪದು. ಹಾಗೆಯೇ ವೆಂಕಟ್ ಅವರಿಗೆ ರಾಗಿಣಿಯೇ ನಾಯಕಿಯಾಗಬೇಕೆಂದರೆ ಅವರು ಬೇರೆ ನಿರ್ದೇಶಕರನ್ನು ಹುಡುಕಬೇಕು. ಅವರು ನನ್ನ ಕಡೆಗಿದ್ದರೂ ಈ ಪಾತ್ರಕ್ಕೆ ಸೂಕ್ತ ನಟಿ ಸಿಗುವವರೆಗೂ ಚಿತ್ರೀಕರಣ ಮುಂದೂಡಲು ನಾನು ಸಿದ್ಧ. ಆದರೆ ರಾಗಿಣಿಯವರನ್ನು ಹೊರಹಾಕಲಾಗಿದೆ" ಎನ್ನುತ್ತಾರೆ ನಿರ್ದೇಶಕರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


