ಕ್ವಾಟ್ಲೆ ಸತೀಶ್ ಹುಟ್ಟುಹಬ್ಬದ ದಿನ 'ರಾಕೆಟ್' ಆಡಿಯೋ ಬಿಡುಗಡೆ
'ರಾಕೆಟ್' ಸಿನೆಮಾ ನಟ ನೀನಾಸಮ್ ಸತೀಶ್ ಅವರಿಗೆ ವಿಶೇಷ ಸಿನೆಮಾ ಏಕೆಂದರೆ ಈ ಸಿನೆಮಾ ಮೂಲಕ ನಿರ್ಮಾಪಕರಾಗಿಯೂ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ

ಬೆಂಗಳೂರು: 'ರಾಕೆಟ್' ಸಿನೆಮಾ ನಟ ನೀನಾಸಮ್ ಸತೀಶ್ ಅವರಿಗೆ ವಿಶೇಷ ಸಿನೆಮಾ ಏಕೆಂದರೆ ಈ ಸಿನೆಮಾ ಮೂಲಕ ನಿರ್ಮಾಪಕರಾಗಿಯೂ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಿನೆಮಾ ನಿರ್ಮಾಣದ ಮೂಲಕ ಭಾರೀ ಸಾಹಸಕ್ಕೆ ಕೈಹಾಕಿರುವ ಸತೀಶ್ ಈ ಚಿತ್ರದ ಆಡಿಯೋ ಬಿಡುಗಡೆಯನ್ನು ತಮ್ಮ ಹುಟ್ಟುಹಬ್ಬದ ದಿನವಾದ ಜೂನ್ ೨೦ಕ್ಕೆ ನಿಗದಿಪಡಿಸಿದ್ದಾರೆ. ಸಿನೆಮಾದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಕೊಂಡಿರುವುದರಿಂದ ಉತ್ಸುಕರಾಗಿರುವ ಸತೀಶ್ "ನನ್ನ ಈ ಸಿನೆಮಾದ ಆಡಿಯೋ ಹಕ್ಕುಗಳು ನನ್ನ ಹಿಂದಿನ ಸಿನೆಮಾ 'ಲವ್ ಇನ್ ಮಂಡ್ಯಾ'ಕ್ಕಿಂತ ಎರಡು ಪಟ್ಟು ಬೆಲೆಗೆ ಮಾರಾಟವಾಗಿದೆ" ಎಂದಿದ್ದಾರೆ.
ಚಲನಚಿತ್ರದ ಪ್ರಾರಂಭಿಕ ಹಾಡನ್ನು ಇತ್ತೀಚೆಗೆ ರಾಕ್ ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಲಾಗಿದೆ. "ಪರಿಚಯ ಹಾಡಿಗೆ ನಾವು ೬ ವಿಭಿನ್ನ ಸೆಟ್ಟುಗಳನ್ನು ಹಾಕಿದ್ದೆವು. ನನ್ನ ವೃತ್ತಿಜೀವನದಲ್ಲಿ ಇದು ಮೊದಲ ಅತಿ ದೊಡ್ಡ ಬಜೆಟ್ ಹಾಡು. ಎಲ್ಲರೂ ಶ್ರಮಪಟ್ಟಿದ್ದಾರೆ. ಜೂನ್ ೮ ಮತ್ತು ೯ ರಂದು ಮತ್ತೊಂದು ಹಾಡಿನ ಚಿತ್ರೀಕರಣ ನಿಗದಿಯಾಗಿದೆ. ಆಡಿಯೋ ಬಿಡುಗಡೆಯ ನಂತರ ಇನ್ನೆರಡು ಹಾಡುಗಳ ಚಿತ್ರೀಕರಣ ಮಾಡುತ್ತೇವೆ" ಎಂದು ಸತೀಶ್ ತಿಳಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಸಿನೆಮಾಗೆ ಸಂಗೀತ ನಿರ್ದೇಶಿಸಿದ್ದು ಒಂದು ಹಾಡನ್ನು ನಟಿ ಐಶಾನಿ ಶೆಟ್ಟಿಯೊಂದಿಗೆ ಪುನೀತ್ ರಾಜಕುಮಾರ್ ಹಾಡಿದ್ದಾರೆ. ಉಳಿದ ಹಾಡುಗಳನ್ನು ಚಂದನ್ ಶೆಟ್ಟಿ ಹಾಡಿದ್ದು ಒಂದು ಹಾಡನ್ನು ಸ್ವತಃ ಸತೀಶ್ ಅವರೇ ಹಾಡಿರುವುದು ವಿಶೇಷ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


