ಸಿನಿಮಾ ಸುದ್ದಿ

ಭಜರಂಗಿ ಭಾಯಿಜಾನ್ ಪಾಕ್ ನಲ್ಲೂ ಹಿಟ್!

ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರ ಭಾರತದಲ್ಲಿ ಮಾತ್ರವೇ ದಾಖಲೆ ನಿರ್ಮಿಸದೇ ಪಾಕಿಸ್ತಾನದಲ್ಲೂ ದಾಖಲೆ ನಿರ್ಮಿಸಿದೆ.

ಭಜರಂಗಿ ಭಾಯಿಜಾನ್ ಪಾಕ್ ನಲ್ಲೂ ಹಿಟ್!
ಭಜರಂಗಿ ಭಾಯಿಜಾನ್(ಸಂಗ್ರಹ ಚಿತ್ರ)
Published On :

ಇಸ್ಲಾಮಾಬಾದ್: ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರ ಭಾರತದಲ್ಲಿ ಮಾತ್ರವೇ ದಾಖಲೆ ನಿರ್ಮಿಸದೇ ಪಾಕಿಸ್ತಾನದಲ್ಲೂ ದಾಖಲೆ ನಿರ್ಮಿಸಿದೆ. ಪಾಕಿಸ್ತಾನದಲ್ಲಿ ಚಿತ್ರಕ್ಕೆ ಅಪಾರ ಜನಮನ್ನಣೆ ದೊರೆತಿದ್ದು ಪ್ರಥಮ ವಾರದಲ್ಲೇ ಪಾಕ್ ಚಿತ್ರಮಂದಿರಗಳ ಬಾಕ್ಸ್ ಆಫೀಸ್ ನಲ್ಲಿ ರೂ.6 ಮಿಲಿಯನ್ ಹಣ ಗಳಿಸಿದೆ.

ಕೇವಲ ಕರಾಚಿ ಮತ್ತು ಇಸ್ಲಾಮಾಬಾದ್ ನಲ್ಲಿ ಮಾತ್ರ 6 ಮಿಲಿಯನ್ ಗಳಿಕೆಯಾಗಿರುವುದು ವಿಶೇಷವಾಗಿದೆ. ಜು.17 ರಂದು ಪಾಕಿಸ್ತಾನದಲ್ಲಿ ತೆರೆಕಂಡಿದ್ದ ಕಬೀರ್ ಖಾನ್ ನಿರ್ದೇಶನದ ಭಜರಂಗಿ ಭಾಯಿಜಾನ್ ಚಿತ್ರದ ಎದುರು,   ಪಾಕಿಸ್ತಾನದಲ್ಲಿ ನಿರ್ಮಾಣವಾದ ಬಿನ್ ರೋಯೆ, ರಾಂಗ್ ನಂಬರ್ ಚಿತ್ರಗಳು ಕಳೆಗುಂದಿವೆ.

ಪಾಕಿಸ್ತಾನದ ಮೂಕ ಬಾಲಕಿ ಹಾಗೂ ಭಾರತೀಯ ಯುವಕನ ಕಥೆಹೊಂದಿರುವ ಈ ಚಿತ್ರ ಕರಾಚಿ, ಇಸ್ಲಾಮಾಬಾದ್ ನಲ್ಲಿ ಪ್ರಥಮ ವಾರದಲ್ಲಿ 3 .2  ಮಿಲಿಯನ್ ಹಣ ಗಳಿಸಿದ್ದರೆ ಮಹಿರ್ ಖಾನ್ ಹಾಗೂ ಹುಮಾಯುನ್ ಸಯೀದ್ ಅಭಿನಯದ ಬಿನ್ ರೊಯೆ 2 .8 ಮಿಲಿಯನ್ ಗಳಿಸಿದೆ. ಇನ್ನು ರಾಂಗ್ ನಂಬರ್ ಚಿತ್ರದ ಹಳಿಗೆ 2.7 ಮಿಲಿಯನ್ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.  

ಆರಂಭದಲ್ಲಿ ಭಜರಂಗಿ ಭಾಯಿಜಾನ್ ಚಿತ್ರ ಬಿಡುಗಡೆಗೆ ಪಾಕಿಸ್ತಾನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತಾದರೂ, ಬಿಡುಗಡೆಯ ಬಳಿಕ ಪಾಕಿಸ್ತಾನದ ಪ್ರೇಕ್ಷಕನ ಮನಗೆದ್ದಿದೆ.  ಇನ್ನು ಭಾರತದಲ್ಲಿ ಭಜರಂಗಿ ಭಾಯಿಜಾನ್ ಚಿತ್ರದ ಪ್ರಥಮ ವಾರದ ಗಳಿಕೆ 184 .62 ಕೋಟಿಗಳಿಕೆ ರೂಪಾಯಿಯಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.