ಥಾಯ್ಲೆಂಡ್‌ನಲ್ಲಿ 'ಬಾಕ್ಸರ್' ಹಾಡಿನ ಚಿತ್ರೀಕರಣ
ನಿರ್ದೇಶಕ ಪ್ರೀತಂ ಗುಬ್ಬಿಯ ಬಾಕ್ಸರ್ ಮೂವಿ ಥಾಯ್ಲೆಂಡ್ ನ ಚಿಯಾಂಗ್ ಮೈ ನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಇದೇ ಮೊದಲ ಬಾರಿಗೆ...

ನಿರ್ದೇಶಕ ಪ್ರೀತಂ ಗುಬ್ಬಿಯ ಬಾಕ್ಸರ್ ಮೂವಿ ಥಾಯ್ಲೆಂಡ್ ನ ಚಿಯಾಂಗ್ ಮೈ ನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಭಾರತೀಯ ಚಿತ್ರವೊಂದು ಇಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು, ನೋಡಲು ಭೀಕರವಾಗಿ ರಕ್ಕಸರಂತೆ ಕಾಣುವ ವಿಲಕ್ಷಣ ಸ್ಥಳಗಳಲ್ಲಿ ಚಿತ್ರತಂಡ ಚಿತ್ರೀಕರಣ ಮಾಡುತ್ತಿದೆ.
ಡೈರೆಕ್ಟರ್ ಸ್ಪೇಷಲ್ ಖ್ಯಾತಿಯ ಧನಂಜಯ್ ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶರಣ್ ಅಭಿನಯದ ಬುಲೆಟ್ ಬಸ್ಯಾ ಹಾಗೂ ಬಾಕ್ಸರ್ ಚಿತ್ರದ ಪ್ರೋಮೊಗಳು ಬಿಡುಗಡೆಗೊಂಡಿದ್ದವು. ಇದೀಗ ಬಾಕ್ಸರ್ ಚಿತ್ರ ತಂಡ ಹಾಡುಗಳ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದ್ದು. ಮುಂದಿನ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.
ಥಾಯ್ಲೆಂಡ್ ನ ಚಿಯಾಂಗ್ ಮೈ ನಲ್ಲಿ ಅದ್ಧೂರಿ ಸ್ಥಳಗಳಲ್ಲಿದ್ದು, ಚಿತ್ರೀಕರಣಕ್ಕಾಗಿ ಸ್ಥಳಗಳ ಅನ್ವೇಷನೆಯಲ್ಲಿದ್ದಾಗ ಚಿಯಾಂಗ್ ಮೈನ ಜಾಗ ತುಂಬಾನೆ ಸುಂದರವಾಗಿತ್ತು. ಹಚ್ಚ ಬಿಳಿಯ ಕಲಾಕೃತಿಯ ಮಧ್ಯೆ ಚಿತ್ರೀಕರಣ ಸುಂದರವಾಗಿ ಚಿತ್ರೀಕರಿಸಲಾಗಿದೆ ಎಂದು ನಿರ್ದೇಶಕ ಪ್ರೀತಂ ಗುಬ್ಬಿ ಹೇಳಿದ್ದು, ಬಾಕ್ಸರ್ ಚಿತ್ರ ಬರೀ ಆಕ್ಷನ್ಗೆ ಸೀಮಿತವಲ್ಲ, ಚಿತ್ರದಲ್ಲಿ ಪ್ರೀತಿಯು ಇದೆ ಎಂದರು.
ನೃತ್ಯ ನಿರ್ದೇಶಕ ಹರ್ಷ ನಿರ್ದೇಶನದಲ್ಲಿ ಮೂಡಿಬಂದ ಧನಜಂಯ್ ಹಾಗೂ ಕೃತಿಕ ಜಯಕುಮಾರ್ ನಡುವಿನ ಡ್ಯೂಯೆಟ್ ಸಾಂಗ್ ನ್ನು ಛಾಯಾಗ್ರಾಹಕ ಪ್ರೀತ ಜಯರಾಮ್ ಸುಂದರವಾಗಿ ಸೆರೆಯಿಡಿದಿದ್ದಾರೆ. ಬಾಕ್ಸರ್ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಯೋಗರಾಜ್ ಭಟ್, ಜಯಂತ್ ಕಾಯ್ಕಣಿ ಮತ್ತು ಪವನ್ ಒಡೆಯರ್ ಹಾಡುಗಳನ್ನು ಬರೆದಿದ್ದು, ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ.
ಬಾಕ್ಸರ್ ಚಿತ್ರ ಮುಂದಿನ ಆಗಸ್ಟ್ ತಿಂಗಳಲ್ಲಿ ತೆರೆ ಮೇಲೆ ಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


