ಸಿನಿಮಾ ಸುದ್ದಿ

ಮಣಿರತ್ನಂ ಮುಂದಿನ ಚಿತ್ರದಲ್ಲಿ ಐಶ್ವರ್ಯ ಇಲ್ಲ

ಇನ್ನೂ ಹೆಸರಿಡದ ಮಣಿರತ್ನಂ ನಿರ್ದೇಶನದ ತಮಿಳು ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್ ನಟಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಕಾರ್ತಿ ಮತ್ತು ದಲ್ಕ್ವೇರ್ ಸಲ್ಮಾನ್

ಮಣಿರತ್ನಂ ಮುಂದಿನ ಚಿತ್ರದಲ್ಲಿ ಐಶ್ವರ್ಯ ಇಲ್ಲ
ನಟಿ ಐಶ್ವರ್ಯ ರೈ ಬಚ್ಚನ್
Published On :

ಚೆನ್ನೈ: ಇನ್ನೂ ಹೆಸರಿಡದ ಮಣಿರತ್ನಂ ನಿರ್ದೇಶನದ ತಮಿಳು ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್ ನಟಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಕಾರ್ತಿ ಮತ್ತು ದಲ್ಕ್ವೇರ್ ಸಲ್ಮಾನ್ ಈ ಚಿತ್ರದ ಪ್ರಮುಖ ನಟರು.

"ಅವರ ಮುಂದಿನ ಯೋಜನೆಗೆ ಮಣಿರತ್ನಂ ಅವರು ಇನ್ನೂ ನಾಯಕ ನಟಿಯನ್ನು ಅಂತಿಮಗೊಳಿಸಬೇಕಿದೆ. ವದಂತದಿಗಳಿಗೆ ವಿರುದ್ಧವಾಗಿ ಐಶ್ವರ್ಯ ರೈ ಅವರು ಈ ಸಿನೆಮಾದ ಭಾಗವಾಗಿರುವುದಿಲ್ಲ" ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ ನಲ್ಲಿ ಚಲನಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

"ಈ ಸಿನೆಮಾ ಚಿತ್ರೀಕರಣ ಸೆಪ್ಟಂಬರ್ ನಲ್ಲಿ ಪ್ರಾರಂಭವಾಗಬೇಕಿತ್ತು ಆದರೆ ದಲ್ಕ್ವೇರ್ ಅವರು ರಾಜೀವ್ ರವಿ ನಿರ್ದೇಶನದ ಮಲಯಾಳಮ್ ಚಿತ್ರವೊಂದರ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಆದುದರಿಂದ ಅವರು ಅದನ್ನು ಮುಗಿಸುವವರೆಗೆ ಚಿತ್ರತಂಡ ಕಾಯಲಿದೆ" ಎಂದು ತಿಳಿಯಲಾಗಿದೆ.

ಮಣಿರತ್ನಂ ಅವರ 'ಇರುವರ್', 'ಗುರು' ಮತ್ತು 'ರಾವನ್' ಚಲನಚಿತ್ರಗಳಲ್ಲಿ ಐಶ್ವರ್ಯಾ ರೈ ನಟಿಸಿದ್ದಾರೆ ಸದ್ಯಕ್ಕೆ 'ಜಸ್ಬಾ' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.