ಸಿನಿಮಾ ಸುದ್ದಿ

ಚಿತ್ರವೊಂದರಲ್ಲಿ ನಟಿಸಲಿದ್ದಾರೆ ರಾಜೀವ್ ಗಾಂಧಿ ಕೊಲೆ ಅಪರಾಧಿ

ಅಂದುಕೊಂಡಂತೆ ಆದರೆ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕ ಎಜಿ ಪೆರಾರಿವಾಲನ್ ಅಲಿಯಾಸ್ ಅರಿವು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ...

ಚಿತ್ರವೊಂದರಲ್ಲಿ ನಟಿಸಲಿದ್ದಾರೆ ರಾಜೀವ್ ಗಾಂಧಿ ಕೊಲೆ ಅಪರಾಧಿ
ಜನನಾಥನ್
Published On :

ವೆಲ್ಲೂರು: ಅಂದುಕೊಂಡಂತೆ ಆದರೆ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕ ಎಜಿ ಪೆರಾರಿವಾಲನ್ ಅಲಿಯಾಸ್ ಅರಿವು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಎಸ್ ಪಿ ಜನನಾಥನ್ ತಮ್ಮ ಮುಂದಿನ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸಲಿದ್ದಾರೆ.

ತಮಿಳಿನ ಪೊರಂಪೊಕು ಎಂಗಿರ ಪೊತುವುದಮೈ ಖ್ಯಾತಿಯ ನಿರ್ದೇಶಕ ಜನನಾಥನ್ ಹಾಗೂ ಅರಿವು ಅವರ ತಾಯಿ ಅರ್ಪುತಮ್ಮಲ್ ಇಬ್ಬರು ವೆಲ್ಲೂರ್ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಶಿಕ್ಷೆ ಅನುಭವಿಸುತ್ತಿರುವ ಅರಿವುರನ್ನು ಮಾತನಾಡಿಸಿದ್ದು, ಅವರು ಒಪ್ಪಿಕೊಂಡರೆ ಚಿತ್ರ ನಿರ್ದೇಶನಕ್ಕೆ ಕೈ ಹಾಕುವುದಾಗಿ ಹೇಳಿದ್ದಾರೆ.

ತಮಿಳಿನ ಆರ್ಯ ಮತ್ತು ವಿಜಯ್ ಸೆತ್ತುಪಟ್ಟಿ ನಟನೆಯ ಪೊರಂಪೊಕು ಎಂಗಿರ ಪೊತುವುದಮೈ ಚಿತ್ರ ಮರಣದಂಡನೆಗೆ ಸಂಬಂಧಿಸಿದಾಗಿದ್ದು, ಚಿತ್ರವನ್ನು ಒಂದು ಬಾರಿಯು ವೀಕ್ಷಿಸದ ಅರಿವು ಚಿತ್ರದ ಕತೆ ಹಾಗೂ ಮಾಧ್ಯಮಗಳ ವಿಮರ್ಶೆಗಳನ್ನು ನೋಡಿ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.