ಸಿನಿಮಾ ಸುದ್ದಿ

'ಆಟಗಾರ'ನ ಹಾಡಿನಲ್ಲಿ ಕನ್ನಡದ ಇಬ್ಬರು ಹಿರಿಯ ನಟರಿಗೆ ಗೌರವ; ಮೂರನೆಯವರು ಯಾರು?

'ಆ ದಿನಗಳು' ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶನದ, ದ್ವಾರಕೀಶ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ 'ಆಟಗಾರ' ಸಿನೆಮಾದ ಈ ಹಾಡಿನಲ್ಲಿ ಒಗಟಿನ ಸಾಹಿತ್ಯ

'ಆಟಗಾರ'ನ ಹಾಡಿನಲ್ಲಿ ಕನ್ನಡದ ಇಬ್ಬರು ಹಿರಿಯ ನಟರಿಗೆ ಗೌರವ; ಮೂರನೆಯವರು ಯಾರು?
ಆಟಗಾರ ಸಿನೆಮಾ ಸ್ಟಿಲ್
Published On :

ಬೆಂಗಳೂರು: 'ಆ ದಿನಗಳು' ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶನದ, ದ್ವಾರಕೀಶ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ 'ಆಟಗಾರ' ಸಿನೆಮಾದ ಈ ಹಾಡಿನಲ್ಲಿ ಒಗಟಿನ ಸಾಹಿತ್ಯ ರಚಿಸುವ ಮೂಲಕ ಕನ್ನಡದ ಹಿರಿಯ ನಟರಾದ ಡಾ. ರಾಜಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರಿಗೆ ಗೌರವ ಸಮರ್ಪಿಸಿದ್ದಾರೆ.

ಆದರೆ ಸಂಪೂರ್ಣ ಹಾಡನ್ನು ಸಾರ್ವಜನಿಕಗೊಳಿಸದೆ, ಈ ಹಾಡಿನಲ್ಲಿ ಗುರವಿಸಲಾಗಿರುವ ಕನ್ನಡ ಚಿತ್ರೋದ್ಯಮದ ಮೂರನೆ ವ್ಯಕ್ತಿ ಯಾರು ಎಂದು ನಿರ್ದೇಶಕ ಚೈತನ್ಯ ತಮ್ಮ ಫೇಸ್ಬುಕ್ ಪುಟದಲ್ಲಿ ಪ್ರಶ್ನೆ ಹಾಕಿದ್ದಾರೆ.

ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಈ ಸಿನೆಮಾದ ಈ ಹಾಡಿನ ಗೀತರಚನಕಾರ ರೋಹಿತ್ ಪದಕಿ. ಅಚ್ಯುತ್ ಕುಮಾರ್, ಧ್ರುವ್ ಸರ್ಜಾ ಇನ್ನು ಹಲವಾರು ನಟರು ಮುಖ್ಯ ಪಾತ್ರಧಾರಿಗಳಾಗಿದ್ದು, ಈ ಥ್ರಿಲ್ಲರ್ ಸಿನೆಮಾ ಆಗಸ್ಟ್ ನಲ್ಲಿ ಬಿಡುಗಡೆ ಕಾಣಲಿದೆ ಎನ್ನಲಾಗಿದೆ.

ಈ ಹಾಡು ನೋಡಿ, ಮೂರನೆ ವ್ಯಕ್ತಿಯನ್ನು ಗೆಸ್ ಮಾಡಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.