'ಮಾರಿ'ಗೆ ಹೆಮ್ಮಾರಿಯಂತೆ ಕಾಡುತ್ತಿರುವ ಬಾಹುಬಲಿ
ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಲನಚಿತ್ರವನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರ ಮಾಲೀಕರಿಗೆ ಧರ್ಮಸಂಕಷ್ಟ!

ಚೆನ್ನೈ: ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಲನಚಿತ್ರವನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರ ಮಾಲೀಕರಿಗೆ ಧರ್ಮಸಂಕಷ್ಟ! ಅತ್ಯುತ್ತಮ ಪ್ರದರ್ಶನ ನೀಡುತ್ತಿರುವಾಗಲೂ ಯಾವ ರೀತಿಯ ಸಂಕಷ್ಟ ಎಂದಿರೇ? ಏಕೆಂದರ ಶುಕ್ರವಾರ ಬಾಲಾಜಿ ಮೋಹನ್ ನಿರ್ದೇಶನದ ಧನುಶ್ ನಟನೆಯ 'ಮಾರಿ' ಬಿಡುಗಡೆಯಾಗುತ್ತಿದೆ. ಈ ಚಲನಚಿತ್ರದ ಬಿಡುಗಡೆಯಾ ದಿನಾಕವನ್ನು ಬಹಳ ಹಿಂದೆಯೇ ನಿಗದಿ ಮಾಡಲಾಗಿದ್ದು, ಸಿನೆಮಾ ಪ್ರದರ್ಶನಕ್ಕೆ ಪ್ರಾದೇಶಿಕ ವಿತರಕರು ಮತ್ತು ಚಲನಚಿತ್ರ ಮಾಲೀಕರು ಈಗಾಗಲೇ ಮುಂಗಡ ಹಣ ನೀಡಿದ್ದಾರೆ. ಇಂತಹ ಸಮಯದಲ್ಲಿ ತುಂಬಿದ ಚಿತ್ರಮಂದಿರಗಳಲ್ಲಿ ಓಡುತ್ತಿರುವ 'ಬಾಹುಬಲಿ'ಯನ್ನು 'ಮಾರಿ'ಗಾಗಿ ಓಡಿಸುವುದು ಹೇಗೆ?
ಆದರೆ ಮಾರುಕಟ್ಟೆ ಭಾವನೆಗಳು ಧನುಶ್ ಪರವಾಗಿವೆ. ಏಕೆಂದರೆ ಧನುಶ್ ಅವರ ಈ ಹಿಂದಿನ ಎರಡು ಚಿತ್ರಗಳು 'ವೇಲಯಿಲ್ಲ ಪಟ್ಟಧಾರಿ' ಮಾತು 'ಆನೆಗನ್' ಬ್ಲಾಕ್ ಬಸ್ಟರ್ ಸಿನೆಮಾಗಳು. ಅಲ್ಲದೆ ಬಾಹುಬಲಿ ತಮಿಳಿನಲ್ಲಿ ಬಿಡುಗಡೆಯಾಗಿದ್ದರು ಮೂಲತಃ ತೆಲುಗು ಸಿನೆಮಾ. ಇದು ಒಂದು ವಾರ ಓಡಬಹುದಷ್ಟೇ ಎಂಬುದು ಎಲ್ಲರ ಎಣಿಕೆಯಾಗಿತ್ತು. ಆದರೆ ಈಗ ಅದು ಎಲ್ಲ ಎಣಿಕೆಗಳನ್ನು ಸುಳ್ಳಾಗಿಸಿ ಎರಡೇ ದಿನಗಳಲ್ಲಿ ನೂರು ಕೋಟಿ ಬಾಚಿ ಹೆಮ್ಮಾರಿಯಂತೆ ಮುನ್ನುಗ್ಗುತ್ತಿದೆ.
ಪರಿಸ್ಥಿತಿ ಹೀಗಿರುವಾಗ ಚಲನಚಿತ್ರಮಂದಿರ ಮಾಲೀಕರು ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಬಳಿ ಹೋಗಿ, 'ಮಾರಿ' ಚಿತ್ರದ ಬಿಡುಗಡೆಯನ್ನು ಮೂಂದೂಡುವಂತೆ ಮನವಿ ಮಾಡಲು ಮುಂದಾಗಿದ್ದಾರಂತೆ.
ಆದುದರಿಂದ 'ಬಾಹುಬಲಿ' ಎಂಬ ಹೆಮ್ಮಾರಿ ತಮಿಳು 'ಮಾರಿ' ಮುನ್ನುಗ್ಗಲು ದಾರಿ ಮಾಡಿಕೊಡುವುದೇ ಅಥವಾ 'ಮಾರಿ' ಇನ್ನೂ ಸ್ವಲ ದಿನ ಮೌನಕ್ಕೆ ಶರಣಾಗಬೇಕಾದೀತೆ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


