ಸಿನಿಮಾ ಸುದ್ದಿ

ಬಾಹುಬಲಿ-2ನಲ್ಲಿ ಕಿಚ್ಚ ಸುದೀಪ್‌ಗೆ ಪ್ರಮುಖ ಪಾತ್ರ: ರಾಜಮೌಳಿ

ಬಾಹುಬಲಿಯ ಅಬ್ಬರಕ್ಕೆ ಬಾಕ್ಸ್ ಆಫೀಸ್‌ನ ಎಲ್ಲಾ ದಾಖಲೆಗಳು ಧೂಳಿಪಟವಾಗಿದ್ದು, ಮೂರೇ ದಿನದಲ್ಲಿ 160 ಕೋಟಿ ರುಪಾಯಿ ಗಳಿಸುವ ಮೂಲಕ ಬಾಹುಬಲಿ...

ಬಾಹುಬಲಿ-2ನಲ್ಲಿ ಕಿಚ್ಚ ಸುದೀಪ್‌ಗೆ ಪ್ರಮುಖ ಪಾತ್ರ: ರಾಜಮೌಳಿ
ಎಸ್.ಎಸ್. ರಾಜಮೌಳಿ
Published On :

ಬಳ್ಳಾರಿ: ಬಾಹುಬಲಿಯ ಅಬ್ಬರಕ್ಕೆ ಬಾಕ್ಸ್ ಆಫೀಸ್‌ನ ಎಲ್ಲಾ ದಾಖಲೆಗಳು ಧೂಳಿಪಟವಾಗಿದ್ದು, ಮೂರೇ ದಿನದಲ್ಲಿ 160 ಕೋಟಿ ರುಪಾಯಿ ಗಳಿಸುವ ಮೂಲಕ ಬಾಹುಬಲಿ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

ಎರಡು ದಿನದಲ್ಲಿ 100 ಕೋಟಿ ಗಳಿಸುವ ಮೂಲಕ ಅತಿ ವೇಗದಲ್ಲಿ 100 ಕೋಟಿ ಕ್ಲಬ್ ಸೇರಿದ್ದ ಬಾಹುಬಲಿ, ಮೂರನೇ ದಿನ 160 ಕೋಟಿ ರುಪಾಯಿ ಗಳಿಸಿದೆ ಎಂದು ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿ ಘೋಷಿಸಿದ್ದಾರೆ.

ಬಳ್ಳಾರಿಯ ರಾಧಿಕಾ ಚಿತ್ರಮಂದಿರದಲ್ಲಿ ಕುಟುಂಬ ಸಮೇತರಾಗಿ ಬಾಹುಬಲಿ ಚಿತ್ರ ವಿಕ್ಷೀಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಮೌಳಿ, ಚಿತ್ರ ಬಿಡುಗಡೆಗೂ ಮುನ್ನ ನನಗೆ ತುಂಬಾ ಆತಂಕ ಇತ್ತು. ಆದರೆ ಬಿಡುಗಡೆಯಾದ ನಂತರ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದೆ ಎಂದರು.

ಇದೇ ವೇಳೆ ಬಾಹುಬಲಿ-2 ಚಿತ್ರೀಕರಣ ಸಹ ಪ್ರಗತಿಯಲ್ಲಿದ್ದು, ಶೇ.40 ಚಿತ್ರೀಕರಣವಾಗಿದೆ ಎಂದರು. ಅಲ್ಲದೆ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಹಾಗೂ ಅನುಷ್ಕಾ ಶೆಟ್ಟಿ ಅವರಿಗೆ ಪ್ರಮುಖ ಪಾತ್ರ ನೀಡಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.