ಸಿನಿಮಾ ಸುದ್ದಿ

ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದ 'ಬಾಹುಬಲಿ'

ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಇಂದು ತೆರೆಕಂಡಿದ್ದು, ಸಾಮಾಜಿಕ ತಾಣದಲ್ಲಿ 'ಬಾಹುಬಲಿ' ಸಂಚಲನ ಸೃಷ್ಟಿಸಿದೆ.

ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದ 'ಬಾಹುಬಲಿ'
ಬಾಹುಬಲಿ
Published On :

ಹೈದ್ರಾಬಾದ್: ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಇಂದು ತೆರೆಕಂಡಿದ್ದು, ಸಾಮಾಜಿಕ ತಾಣದಲ್ಲಿ ಬಾಹುಬಲಿ ಸಂಚಲನ ಸೃಷ್ಟಿಸಿದೆ.

ಪ್ರಮುಖ ಸಾಮಾಜಿಕ ತಾಣಗಳಾದ ಫೇಸ್‌ಬುಕ್, ಟ್ವಿಟರ್‌ಗಳಲ್ಲಿಂದು  ಬಾಹುಬಲಿ ಚಿತ್ರದ ಬಗ್ಗೆಯೇ ನೆಟಿಜನ್‌ಗಳು ಅಪ್‌ಡೇಟ್ ಕೊಡುತ್ತಿದ್ದಾರೆ.

ಬಹುಭಾಷೆಯಲ್ಲಿ ತೆರೆ ಕಂಡಿರುವ ಈ ಚಿತ್ರದ ಫೇಸ್‌ಬುಕ್  ಪೇಜ್‌ಗೆ ಸಿನಿಮಾ ಬಿಡುಗಡೆಯಾಗುವ ಮುನ್ನ ಅಂದರೆ ನಿನ್ನೆ ಸಂಜೆಯವರೆಗೆ 1.2 ಮಿಲಿಯನ್ ಲೈಕ್‌ಗಳು ಸಿಕ್ಕಿವೆ. ಮಾತ್ರವಲ್ಲದೆ ಬಾಹುಬಲಿ ಟ್ವೀಟರ್ ಖಾತೆ  1 ಲಕ್ಷ ಫಾಲೋವರ್‌ಗಳನ್ನು ಹೊಂದಿದೆ.

ಯೂಟ್ಯೂಬ್‌ನಲ್ಲಿ ಬಾಹುಬಲಿ ಟ್ರೇಲರ್‌ನ್ನು 4.05 ಲಕ್ಷ ಮಿಲಿಯನ್ ಜನರು ವೀಕ್ಷಿಸಿದ್ದಾರೆ.

ಸಾಮಾಜಿಕ ತಾಣದಲ್ಲಿ ಬಾಹುಬಲಿ ಹ್ಯಾಶ್ ಟ್ಯಾಗ್  (#bahubali) ಟ್ರೆಂಡಿಂಗ್ ಆಗಿದ್ದು, ಫಸ್ಟ್‌ಡೇ ಫಸ್ಟ್ ಶೋ ನೋಡಿದ ಜನರು ಈಗಾಗಲೇ ತಮ್ಮ ಒನ್ ಲೈನ್ ಅಭಿಪ್ರಾಯಗಳನ್ನು ಸೋಷ್ಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಮಾಡುತ್ತಿದ್ದಾರೆ.

ನೆಟಿಜನ್‌ಗಳು ಅಪ್‌ಡೇಟ್ ಮಾಡಿದ ಸ್ಟೇಟಸ್‌ಗಳಲ್ಲಿ ಹೆಚ್ಚಿನವು ಸಿನಿಮಾ ಬಗ್ಗೆ ಪಾಸಿಟಿವ್ ಅಭಿಪ್ರಾಯವುಳ್ಳದ್ದಾಗಿದೆ. ಸಿನಿಮಾದಲ್ಲಿನ ಯುದ್ಧರಂಗಗಳು, ಗ್ರಾಫಿಕ್ಸ್ , ಕಾಸ್ಟ್ಯೂಮ್ಸ್ ಮತ್ತು ಪ್ರಭಾಸ್, ರಾಣಾ ದುಗ್ಗುಬಾಟಿ, ತಮನ್ನಾ ಭಾಟಿಯಾ, ರಮ್ಯಾಕೃಷ್ಣ ನಟನೆ ಬಗ್ಗೆ ಹೆಚ್ಚಿನವರು ಮೆಚ್ಚಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.