'ಪ್ಲಸ್': ಅನಂತನಾಗ್ ವಿಭಿನ್ನ ನೋಟದ ಹಿಂದೆ ಗಾಯತ್ರಿ
ಕನ್ನಡದ ಮೇರು ನಟ ಅನಂತನಾಗ್ ಅವರದ್ದು ಇಂದಿಗೂ ಮನಮೋಹಕ ನೋಟ ಮತ್ತು ಅವರು ಆಕರ್ಷಕ ಕಟ್ಟಾಳು. ಆದರೆ ಅವರ 'ಲುಕ್' ಗೆ ಇನ್ನೂ ಹೊಸದೇನೋ

ಬೆಂಗಳೂರು: ಕನ್ನಡದ ಮೇರು ನಟ ಅನಂತನಾಗ್ ಅವರದ್ದು ಇಂದಿಗೂ ಮನಮೋಹಕ ನೋಟ ಮತ್ತು ಅವರು ಆಕರ್ಷಕ ಕಟ್ಟಾಳು. ಆದರೆ ಅವರ 'ಲುಕ್' ಗೆ ಇನ್ನೂ ಹೊಸದೇನೋ ಬೇಕು ಎಂದೆನಿಸಿದ್ದು ಅವರ ಪತ್ನಿ ಗಾಯತ್ರಿ ಅವರಿಗೆ. ಅನಂತನಾಗ್ ಬೇಡ ಎಂದರೂ ಗಾಯತ್ರಿ ಅವರು ಬಿಡದೆ, 'ಪ್ಲಸ್' ಸಿನೆಮಾಗೋಸ್ಕರ ಅವರನ್ನು ಮೇಕೋವರ್ ಮಾಡಿರುವುದು ಈಗ ಎಲ್ಲೆಲ್ಲೂ ಚರ್ಚೆಗೆ ಗ್ರಾಸವಾಗಿದೆಯಂತೆ!
"ಈ ಐಡಿಯಾ ಬಂದದ್ದು ನಿರ್ದೇಶಕ ಗಡ್ಡ ವಿಜಿ ಮತ್ತು ನಿರ್ಮಾಪಕ ರಿತೇಶ್ ಅವರಿಂದ. ನಿರ್ಮಾಪಕ ರಿತೇಶ್ ಅವರೇ ಸಿನೆಮಾಗೆ ಕಥೆ ಬರೆದಿರುವುದು, ನನ್ನ 'ಲುಕ್ಸ್' ಬದಲಾಯಿಸಿಕೊಳ್ಳಲು ನನಗೆ ಮೊದಲು ಇಷ್ಟವಿರಲಿಲ್ಲ. ಮೇಕ್ ಅಪ್ ಆದ ನಂತರ ಈ ಐಡಿಯಾ ತಿರಸ್ಕರಿಸಬೇಕು ಎಂದು ಕೂಡ ಮನಸ್ಸು ಮಾಡಿದ್ದೆ. ಆದರೆ ಈ 'ಪ್ರಯೋಗ'ವನ್ನು ಒಪ್ಪಿಕೊಳ್ಳುವಂತೆ ಪುಸಲಾಯಿಸಿದ್ದು ಗಾಯತ್ರಿ. ಸಾಮಾನ್ಯವಾಗಿ ಒಂದು ನಕಲಿ ಗಡ್ಡ ಧರಿಸಬೇಕು ಎಂದು ಹೇಳಿದರೂ ನಾನು ಪಾತ್ರವನ್ನು ತಿರಸ್ಕರಿಸುತ್ತೇನೆ. ಆದರೆ 'ಪ್ಲಸ್' ನಲ್ಲಿ ಒಳ್ಳೆಯ ಫಲ ನೀಡಿದೆ" ಎನ್ನುತ್ತಾರೆ ನಟ ಅನಂತನಾಗ್.
ಸಿನೆಮಾದ ಟ್ರೇಲರ್ ಗಳನ್ನು ನೋಡಿರುವ ನಟ " ಇದೊಂದು ವಿಭಿನ್ನ ಅನುಭವ. ನನ್ನ ವೃತ್ತಿ ಜೀವನದಲ್ಲಿ ಇಂತಹ ಪಾತ್ರ ಎಂದಿಗೂ ಮಾಡಿಲ್ಲ. ಯಾವುದೇ ವಿಭಾಗಕ್ಕೂ ಸೇರಿಸಲಾಗದ ಒಂದು ವಿಶಿಷ್ಟ ಸ್ಕ್ರಿಪ್ಟ್ ಇದು" ಎನ್ನುತ್ತಾರೆ ಅನಂತ್.
ಸಿನೆಮಾದಲ್ಲಿ ಚೇತನ್ ಚಂದ್ರ ಮತ್ತು ಶಾಲಿನಿ ಕೂಡ ನಟಿಸಿದ್ದಾರೆ. ಭರತ್ ಬಿ ಜೆ ಸಿನೆಮಾಗೆ ಸಂಗೀತ ನೀಡಿದ್ದು, ಶೃತಿ ಹರಿಹರನ್ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


