ಎಂಥಿರನ್-2 ನಲ್ಲಿ ರಜನಿಕಾಂತ್, ವಿಕ್ರಮ್ ನಟನೆ
ಸೂಪರ್ ಸ್ಟಾರ್ ರಜನಿ ಕಾಮತ್ ಹಾಗೂ ವಿಕ್ರಂ ಬಹುನಿರೀಕ್ಷಿತ ಎಂಥಿರನ್-2 ರಲ್ಲಿ ನಟಿಸಲಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ವಿಕ್ರಮ್ ಬಹುನಿರೀಕ್ಷಿತ ಎಂಥಿರನ್-2 ರಲ್ಲಿ ನಟಿಸಲಿದ್ದಾರೆ. ಈಗಾಗಲೇ ಚಿತ್ರದ ನಿರ್ಮಾಣ ಪೂರ್ವ(ಪ್ರೀ ಪ್ರೊಡಕ್ಷನ್) ಕೆಲಸಗಳು ಪ್ರಾರಂಭವಾಗಿದೆ.
ರಜನಿಕಾಂತ್ ಚಿತ್ರದಲ್ಲಿ ನಟಿಸುತ್ತಿದ್ದು, ಎಂಥಿರನ್ ಸೀಕ್ವೆಲ್ ನಲ್ಲಿ ನಟಿಸಲು ವಿಕ್ರಮ್ ಕೂಡ ಉತ್ಸುಕರಾಗಿದ್ದಾರೆ. ಆದರೆ ಇನ್ನೂ ಸಹಿ ಹಾಕಿಲ್ಲ ಎಂದು ಐಎಎನ್ಎಸ್ ವರದಿ ಮಾಡಿದೆ. ನಟ ವಿಕ್ರಮ್ ಈಗಾಗಲೇ ಎರಡು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಎಂಥಿರನ್ ಚಿತ್ರದಲ್ಲಿ ಅಭಿನಯಿಸಲು ಕಾಲ್ ಶೀಟ್ ನೀಡಿಲ್ಲ.
ಇನ್ನೂ ಆರು ತಿಂಗಳ ಕಾಲ ವಿಕ್ರಂ ಇನ್ನೆರಡು ಚಿತ್ರಗಳ ಚಿತ್ರೀಕರಣದಲ್ಲಿ ತೊಡಗುವುದರಿಂದ ಎಂಥಿರನ್ -2 ಕ್ಕಾಗಿ ಸಮಯವನ್ನು ಒದಗಿಸಿಕೊಳ್ಳುವುದರ ಬಗ್ಗೆ ಯೋಚಿಸುತ್ತಿದ್ದಾರೆ. ಅದ್ದರಿಂದ ಚಿತ್ರಕ್ಕೆ ಸಹಿಹಾಕಲು ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ. ಬಹುನಿರೀಕ್ಷಿತ ಎಂಥಿರನ್ ಚಿತ್ರದ ಸೀಕ್ವೆಲ್ ಭಾಗದಲ್ಲಿ ವಿಕ್ರಮ್ ಗೆ ಖಳನಾಯಕನ ಪಾತ್ರ ನೀಡಲಾಗಿದೆ.
ನಿರ್ದೇಶಕ ರಜಿಂತ್ ಅವರೊಂದಿಗೆ ರಜನಿಕಾಂತ್ ಸಿನಿಮಾ ಮಾಡುತ್ತಿದ್ದು ಇದಾದ ಕೆಲವೇ ದಿನಗಳಲ್ಲಿ ಶಂಕರ್ ನಿರ್ದೇಶನದ ಎಂಥಿರನ್-2 ನ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


