ಎರಡು ದೃಶ್ಯಗಳಿಂದಾಗಿ 'ದೃಶ್ಯಂ' ತಮಿಳು ರಿಮೇಕ್ ತಿರಿಸ್ಕರಿಸಿದ ರಜನಿ
ಎರಡು ನಿರ್ಧಿಷ್ಟ ದೃಶ್ಯಗಳ ಕಾರಣದಿಂದಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಲೆಯಾಳಂ ಬ್ಲಾಕ್‌ಬಸ್ಟರ್ ಮೂವಿ 'ದೃಶ್ಯ'ದಲ್ಲಿ ಅಭಿನಯಿಸಲು...

ಚೆನ್ನೈ: ಎರಡು ನಿರ್ದಿಷ್ಟ ದೃಶ್ಯಗಳ ಕಾರಣದಿಂದಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಲೆಯಾಳಂ ಬ್ಲಾಕ್‌ಬಸ್ಟರ್ ಮೂವಿ 'ದೃಶ್ಯ'ದಲ್ಲಿ ಅಭಿನಯಿಸಲು ನಿರಾಕರಿಸಿದ್ದಾರೆ.
ಮೂಲಗಳ ಪ್ರಕಾರ, ದೃಶ್ಯಂ ತಮಿಳು ರಿಮೇಕ್ ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ಕೆಲಸ ಮಾಡಲು ನಿರ್ದೇಶಕ ಜೀತು ಜೋಸೆಫ್ ಅವರು ಸಹ ಒಪ್ಪಿಕೊಂಡಿದ್ದರು. ಆದರೆ ಆ ಚಿತ್ರದಲ್ಲಿನ ಎರಡು ದೃಶ್ಯಗಳಿಂದ ತಮ್ಮ ಅಭಿಮಾನಿಗಳಿಗೆ ಬೇಸರವಾಗಬುಹುದು ಎಂಬ ಕಾರಣದಿಂದ ರಜನಿ ನಿರಾಕರಿಸಿದ್ದಾರೆ ಎನ್ನಲಾಗಿದೆ.
'ರಜನಿಕಾಂತ್ ಸರ್ ಅವರು ಕಥೆಯನ್ನು ತುಂಬಾ ಇಷ್ಟಪಟ್ಟಿದ್ದರು. ಆದರೆ ಆ ಚಿತ್ರದಲ್ಲಿನ ಎರಡು ದೃಶ್ಯಗಳು ಅವರಿಗೆ ಇಷ್ಟವಾಗಲಿಲ್ಲ ಎಂದು ಜೀತು ಹೇಳಿರುವುದಾಗಿ' ಮೂಲಗಳು ತಿಳಿಸಿವೆ.
'ರಜನಿಗೆ ಇಷ್ಟವಾಗದ ಮೊದಲ ದೃಶ್ಯ ಎಂದರೆ, ಪೊಲೀಸರು ನಾಯಕನನ್ನು ಹಿಗ್ಗಾಮುಗ್ಗಾ ಥಳಿಸುವುದು. ಮತ್ತೊಂದು ಚಿತ್ರದ ಕ್ಲೈಮ್ಯಾಕ್ಸ್. ರಜನಿ ಅವರನ್ನು ಥಳಿಸುವ ದೃಶ್ಯವನ್ನು ಅವರ ಅಭಿಮಾನಿಗಳು ಇಷ್ಟಪಡುತ್ತಾರೆ ಎಂಬ ನಂಬಿಕೆ ಅವರಿಗೆ ಇರಲಿಲ್ಲ. ಹೀಗಾಗಿ ಅವರು ಚಿತ್ರವನ್ನು ಒಪ್ಪಿಕೊಂಡಿಲ್ಲ' ಎಂದು ಮೂಲಗಳು ತಿಳಿಸಿವೆ.
ರಜನಿ ನಿರಾಕರಿಸಿದ ಬಳಿಕ, ದೃಶ್ಯಂ ತಮಿಳು ರಿಮೇಕ್ 'ಪಾಪನಾಸಂ' ಚಿತ್ರದಲ್ಲಿ ಕಮಲ್ ಹಾಸನ್ ಅಭಿನಯಿಸಿದ್ದು, ಚಿತ್ರ ಈಗ ತಮಿಳುನಾಡಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


