ನನ್ನ ಬಗ್ಗೆ ಪತಿಗೆ ಅಭದ್ರತೆ ಕಾಡುತ್ತಿಲ್ಲ: ಸನ್ನಿ ಲಿಯೋನ್
ಕಿರುತೆರೆ ರಿಯಾಲಿಟಿ ಷೋ ಸ್ಪ್ಲಿಟ್ಸ್ ವಿಲ್ಲಾದ ಸೀಸನ್ 8 ರಲ್ಲಿ ಭಾಗವಹಿಸಲಿರುವ ಸನ್ನಿ ಲಿಯೋನ್ ತಮ್ಮ ಪತಿಗೆ ತಮ್ಮ ಬಗ್ಗೆ ಅಭದ್ರತೆಯ ಭಾವನೆ ಕಾಡುತ್ತಿಲ್ಲ ಎಂದು ಹೇಳಿದ್ದಾರೆ.

ಕಿರುತೆರೆ ರಿಯಾಲಿಟಿ ಷೋ ಸ್ಪ್ಲಿಟ್ಸ್ ವಿಲ್ಲಾದ ಸೀಸನ್ 8 ರಲ್ಲಿ ಭಾಗವಹಿಸಲಿರುವ ಸನ್ನಿ ಲಿಯೋನ್ ತಮ್ಮ ಪತಿಗೆ ತಮ್ಮ ಬಗ್ಗೆ ಅಭದ್ರತೆಯ ಭಾವನೆ ಕಾಡುತ್ತಿಲ್ಲ ಎಂದು ಹೇಳಿದ್ದಾರೆ.
ಬಾಲಿವುಡ್ ನಲ್ಲಿಯೂ ಬಿಡುವಿಲ್ಲದೇ ತೊಡಗಿಸಿಕೊಂಡಿರುವ ಸನ್ನಿ ಲಿಯೋನ್, ಸ್ಪ್ಲಿಟ್ಸ್ ವಿಲ್ಲಾದ ಸೀಸನ್-8 ರಲ್ಲಿ ಮತ್ತೊಮ್ಮೆ ರಣ್ ವಿಜಯ್ ಸಿಂಗ್ ಅವರೊಂದಿಗೆ ಕಾಣಿಸಿಕೊಂಡಿದ್ದು ಇಬ್ಬರ ನಡುವೆ ಬಲವಾದ ಬಾಂಧವ್ಯವನ್ನು ರೂಪುಗೊಂಡಿದೆ ಎಂದು ಹೇಳಲಾಗುತ್ತಿದೆ. ರಣ್ ವಿಜಯ್ ಸಿಂಗ್, ತಮಾಷೆಯ ಮತ್ತು ಚುರುಕಾದ ವ್ಯಕ್ತಿತ್ವ ಹೊಂದಿದ್ದು ಅವರೊಂದಿಗೆ ಶೋ ನಡೆಸಿಕೊಡುವ ಸಂದರ್ಭದಲ್ಲಿ ಸಾಕಷ್ಟು ಸಂತೋಷಪಟ್ಟಿದ್ದೇನೆ, ಅವರೊಂದಿಗೆ ಮತ್ತಷ್ಟು ಶೋಗಳನ್ನು ನಡೆಸಿಕೊಡುವುದಾಗಿ ಸನ್ನಿ ಲಿಯೋನ್ ಹೇಳಿದ್ದಾರೆ.
ಇವೆಲ್ಲದರಿಂದಾಗಿ ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಆತಂಕಕ್ಕೊಳಗಾಗಿದ್ದರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಸನ್ನಿಲಿಯೋನ್, ರಣ್ ವಿಜಯ್ ಸಿಂಗ್ ವಿವಾಹಿತರಾಗಿದ್ದು ಆತನಿಗೆ ಸುಂದರ ಪತ್ನಿ ಇದ್ದಾರೆ, ಅವರಿಬ್ಬರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದೇನೆ, ಅದ್ದರಿಂದ ನನ್ನ ಪತಿಗೆ ನನ್ನ ಬಗ್ಗೆ ಅಭದ್ರತೆ ಕಾಡುವುದಿಲ್ಲ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. ಇದೇ ವೇಳೆ ವಯಸ್ಕರ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸದ ಸನ್ನಿ ಲಿಯೋನ್, ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


