ಹೆಸ್ರು ಮಾತ್ರ ನಕಲು ಸಿನ್ಮಾ ಪಕ್ಕಾ ಒರಿಜಿನಲ್ಲು!
ನಕಲು ಮಾಡಬೇಡಿ ಮನುಜರೇ...ಅಸಲು ಮರೀಬೇಡಿ ಮರುಳರೆ! ಲೆಕ್ಕಾಚಾರ...ನಿಮ್ ಗ್ರಹಚಾರ...ಎಲ್ಲಾ ಪಲ್ಟಿ ಹೊಡೆದರೆ ಬಯಲಲೇ ಕ್ಯಾಬರೆ!!

ನಕಲು ಮಾಡಬೇಡಿ ಮನುಜರೇ...ಅಸಲು ಮರೀಬೇಡಿ ಮರುಳರೆ! ಲೆಕ್ಕಾಚಾರ...ನಿಮ್ ಗ್ರಹಚಾರ...ಎಲ್ಲಾ ಪಲ್ಟಿ ಹೊಡೆದರೆ ಬಯಲಲೇ ಕ್ಯಾಬರೆ!!
ಈ ಹಾಡಿನ ಲೈನುಗಳನ್ನೊಮ್ಮೆ ಗಮನಿಸಿ. ಇದನ್ನು ಗಾಂಧಿನಗರಕ್ಕೆ ಸೀಮಿತಗೊಳಿಸೋದಾದ್ರೆ ರೀಮೇಕ್ ಮಾಡೋವ್ರನ್ನ ಮೂರೇ ಸಾಲಲ್ಲಿ ಬೆತ್ತಲೆ ಮಾಡಿದಂತಿರೋ ಹಾಗಿಲ್ವಾ?
ಹೀಗೊಂದು ಹೊರಾರ್ಥ ಕಾಣಿಸಿದರೂ ವಿ. ಮನೋಹರ್ ಬರೆದಿರುವ ಈ ಹಾಡು ಅದಕ್ಕೂ ಮೀರಿದ ಭರ್ಜರಿ ಫಿಲಾಸಫಿಗಳನ್ನು ಹೇಳಿದೆ. ಹಾಡನ್ನು ಪೂರ್ತಿ ಕೇಳಬೇಕಂದ್ರೆ ನೀವು ಸದ್ಯಕ್ಕೆ ಯೂಟ್ಯೂಬ್ ಹೊಕ್ಕು ಭಾಗ್ಯರಾಜ್-ನಕಲು ಮಾಡಬೇಡಿ ಅಂತ ಟೈಪ್ ಹೊಡಿಬೇಕು.
ಇದು ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಭಾಗ್ಯರಾಜ್ ಎಂಬ ಚಿತ್ರದ ಫಸ್ಟ್‌ಲುಕ್ ಬಗೆಗಿನ ಸುದ್ದಿ. ಭಾಗ್ಯರಾಜ್ ಚಿತ್ರ ಒಂದೂವರೆ ವರ್ಷಕ್ಕೆ ಮೊದಲು ಮುಹೂರ್ತ ಆಚರಿಸಿಕದಾಗಲೇ ತನ್ನ ರೆಟ್ರೋ ಶೈಲಿಯ ಪೋಸ್ಟರ್‌ನಿಂದ ನಿರೀಕ್ಷೆ ಹುಟ್ಟಿಸಿತ್ತು. ಆನಂತರ ಚಿತ್ರ ನಿಂತೇ ಹೋಯ್ತೇನೋ ಎಂಬೆಲ್ಲ ಗುಸುಗುಸುಗಳು ಶುರುವಾಗಿ ಸಿನಿಮಾ ಮರೆತೇ ಹೋಗುವಂತಾಗೋ ಹೊತ್ತಿಗೆ ಭಾಗ್ಯರಾಜ್ ಮತ್ತೆ ಎಂಟ್ರಿ ಕೊಟ್ಟಿದ್ದಾರೆ! ಇನ್ನೂ ಅಬ್ಬರದಿಂದ!
ಅನೂಪ್ ಸೀಳಿನ್ ಸಂಗೀತದಲ್ಲಿ ಮನೋಹರ್ ಬರೆದಿರುವ ಹಾಡಿಗೆ ವಾರಿಜಶ್ರೀ ದನಿ ನೀಡಿದ್ದು ಚಿತ್ರದ ಕೆಲವು ತುಣುಕುಗಳ ಮಧ್ಯೆ ಈ ಮೂರೂ ತೆರೆಹಿಂದಿನ ಪಾತ್ರಗಳು ಕಾಣಿಸಿಕೊಳ್ಳುತ್ತಾ ರಾಕ್ ಶೈಲಿಯ ಹಾಡು ಮತ್ತು ಸೇಪಿಯಾ ಮಾದರಿಯ ಕಲರಿಂಗ್‌ನಲ್ಲಿ ಪೂರ್ತಿಯಾಗಿ ಆವರಿಸಿಕೊಳ್ಳುತ್ತವೆ.
ಸಿದ್ದರಾಜು ನಿರ್ಮಾಣದ ಈ ಚಿತ್ರ ಆರ್ಥಿಕ ತೊಂದರೆಗಳಿಂದ ಕೊಂಚ ತಡವಾಯಿತೆಂಬ ಮಾತು ಕೇಳಿಬಂದಿತ್ತು. ಡಿಐ ಹಂತದಲ್ಲಿರುವ ಭಾಗ್ಯರಾಜ್ ಚಿತ್ರವನ್ನು ಎಡಿಟಿಂಗ್ ಮತ್ತು ರಿರೆಕಾರ್ಡಿಂಗ್ ಟೇಬಲ್‌ನಲ್ಲಿ ನೋಡಿದವರು ಈ ಚಿತ್ರ ತಮಿಳಿಗೆ ರೀಮೇಕ್ ಆಗುವುದು ಖಂಡಿತಾ ಎಂದು ನುಡಿಯುತ್ತಿದ್ದಾರೆ. ಉಪೇಂದ್ರ ಮತ್ತು ಎಎಮ್‌ಆರ್ ರಮೇಶ್ ಚಿತ್ರಗಳಿಗೆ ಸಹಾಯಕರಾಗಿ ದುಡಿದ ಅನುಭವವಿರುವ ದೀಪಕ್ ಮಧುವನಹಳ್ಳಿ ನಿರ್ದೇಶನದ ಬಗ್ಗೆ ಪ್ರಶಂಸೆಯ ಮಾತುಗಳು ಬರಲಾರಂಭಿಸಿವೆ. ಖುದ್ದು ತಮಿಳಿನ ಹಿಟ್ ನಿರ್ದೇಶಕ ಸಮುದ್ರಖಣಿ ಭಾಗ್ಯರಾಜ್ ಚಿತ್ರ ನೋಡಿ ಅಚ್ಚರಿ ಪಟ್ಟಿದ್ದಾರೆ.
ಚಿತ್ರದಲ್ಲಿ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತಿರುವುದು ಈಗಷ್ಟೇ ಬಂದಿರುವ ಸುದ್ದಿ. ಯೂಟ್ಯೂಬ್‌ನಲ್ಲಿ ಹಿಟ್ ಆಗುವ ಲಕ್ಷಣ ತೋರಿರುವ ಈ ವೀಡಿಯೋ ಬೆನ್ನಲ್ಲೇ ಲೂಸ್ ಮಾದ ಅಭಿನಯದ ಒಂದು ಹಿಟ್ ಹಾಡು ಕೂಡ ಬಿಡುಗಡೆಯಾಗಲಿದ್ದು, ಆ ಹಾಡು ಭಾಗ್ಯರಾಜ್ ಚಿತ್ರದ ಬಗೆಗಿನ ಕ್ರೇಜನ್ನು ಇನ್ನಷ್ಟು ಹೆಚ್ಚಿಸಲಿದೆಯಂತೆ. ಅಲ್ಲಿಗೆ ಅನೂಪ್ ಸೀಳಿನ್ ಹಿಟ್ ಲಿಸ್ಟ್‌ಗೆ ಭಾಗ್ಯರಾಜ್ ಹೊಸ ಸೇರ್ಪಡೆ ಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


