ಬೆಳ್ಳಿತೆರೆಯ ಮೇಲೆ ಜೊತೆಯಾಗಲಿರುವ ರಾಜ್ ಸಹೋದರರು
ದಕ್ಷಿಣ ಭಾರತ ಮತ್ತಿ ಹಿಂದಿ ಚಲನಚಿತ್ರೋದ್ಯಮದ ವಿಖ್ಯಾತ ಸ್ಟಂಟ್ ಮಾಸ್ಟರ್

ಬೆಂಗಳೂರು: ದಕ್ಷಿಣ ಭಾರತ ಮತ್ತಿ ಹಿಂದಿ ಚಲನಚಿತ್ರೋದ್ಯಮದ ವಿಖ್ಯಾತ ಸ್ಟಂಟ್ ಮಾಸ್ಟರ್ ಆಗಿರುವ ರವಿವರ್ಮ ಸ್ಯಾಂಡಲ್ ವುಡ್ ನಲ್ಲಿ ಇತಿಹಾಸ ನಿರ್ಮಿಸಲು ಉತ್ಸುಕರಾಗಿದ್ದಾರೆ. ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ ಅವರನ್ನು ಬೆಳ್ಳಿತೆರೆಯಲ್ಲಿ ಒಟ್ಟಿಗೆ ತರುವ ಯೋಜನೆಯಲ್ಲಿ ಸಫಲರಾಗಿದ್ದಾರೆ. ಈ ಹಿಂದೆ ಸುಮಾರು ನಿರ್ದೇಶಕ-ನಿರ್ಮಾಪಕರು ಇದನ್ನು ಬಯಸಿದ್ದರೂ ಯಶಸ್ವಿಯಾಗಿರುವುದು ರವಿವರ್ಮ ಮಾತ್ರ! ನಿರ್ಮಾಪಕ ಜಯಣ್ಣ ಸಿನೆಮಾಗೆ ಹಣ ಹೂಡಲಿದ್ದಾರೆ ಎಂದಿದ್ದಾರೆ ರವಿವರ್ಮ.
ಸದ್ಯಕ್ಕೆ ಶಾರುಕ್ ಖಾನ್ ಅವರ ಮುಂಬರುವ ಸಿನೆಮಾ ಒಂದರಲ್ಲಿ ಸ್ಟಂಟ್ ಮ್ಯಾನ್ ಆಗಿ ಕಾರ್ಯನಿರತರಾಗಿರುವ ರವಿವರ್ಮ, ೨೦೧೫ ರ ಎರಡನೆ ಭಾಗದಲ್ಲಿ ತಮ್ಮ ಚೊಚ್ಚಲ ನಿರ್ದೇಶನದ ಸಿನೆಮಾದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ಎಂದಿದ್ದಾರೆ ರವಿವರ್ಮ.
"ಈ ಸಿನೆಮಾ ನಿರ್ಮಿಸಲು ತೆಲುಗು ಮತ್ತು ಹಿಂದಿ ಚಲನಚಿತ್ರೋದ್ಯಮದಲ್ಲಿ ಸುಮಾರು ಜನ ಮುಂದೆ ಬಂದಿದ್ದರು. ಶಾರುಕ್ ಖಾನ್ ಕೂಡ ಒಪ್ಪಿದ್ದರು. ಆದರೆ ಅದಕ್ಕೆ ನಾನು ೨೦೧೭ರ ವರಗೆ ಕಾಯಬೇಕಿತ್ತು. ಆದರೆ ಈಗ ಕನ್ನಡದಲ್ಲಿ ಇದನ್ನು ನಿರ್ದೇಶಿಸಿದ ಬಳಿಕ ತೆಲುಗು ಮತ್ತು ಹಿಂದಿಯಲ್ಲಿ ಕೂಡ ರಿಮೇಕ್ ಮಾಡಲಿದ್ದೇನೆ" ಎನ್ನುತ್ತಾರ ರವಿ.
ಪುನೀತ್ ಸದ್ಯಕ್ಕೆ ಪವನ್ ಒಡೆಯರ್ ಅವರ 'ರಣ ವಿಕ್ರಮ' ಸಿನೆಮಾದಲ್ಲಿ ಕಾರ್ಯನಿರತರಾಗಿದ್ದು, ನಂತರ ಸೂರಿ ಅವರ 'ದೊಡ್ಮನೆ ಹುಡುಗ' ಸಿನೆಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಶಿವರಾಜ್ ಕುಮಾರ್ 'ವಜ್ರಕಾಯ' ಸಿನೆಮಾ ಬಹುತೇಕ ಮುಗಿಸಿದ್ದು, ಪಿ ವಾಸು ಅವರ 'ಶಿವಲಿಂಗ' ಸಿನೆಮಾದಲ್ಲಿ ಸದ್ಯಕ್ಕೆ ತೊಡಗಿಸಿಕೊಂಡಿದ್ದಾರೆ. ಈ ಸಿನೆಮಾಗಳ ನಂತರ ಇವರಿಬ್ಬರೂ ಹೊಸ ಸಿನೆಮಾದಲ್ಲಿ ಒಟ್ಟಿಗೆ ಕೆಲಸ ಪ್ರಾರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


