ಸಿನಿಮಾ ಸುದ್ದಿ

ಹೊಸವರ್ಷದಲ್ಲಿ ಬಿಡುಗಡೆಗೆ ಕಾಯುತ್ತಿರುವ ಶ್ರುತಿ ಹಾಸನ್ ಅವರ ೬ ಚಿತ್ರಗಳು

ಈ ಹೊಸವರ್ಷ ನಟಿ ಶ್ರುತಿ ಹಾಸನ್ ಅತಿ ಹೆಚ್ಚು ...

ಹೊಸವರ್ಷದಲ್ಲಿ ಬಿಡುಗಡೆಗೆ ಕಾಯುತ್ತಿರುವ ಶ್ರುತಿ ಹಾಸನ್ ಅವರ ೬ ಚಿತ್ರಗಳು
ಶ್ರುತಿ ಹಾಸನ್
Published On :

ಚೆನ್ನೈ: ಈ ಹೊಸವರ್ಷ ನಟಿ ಶ್ರುತಿ ಹಾಸನ್ ಅತಿ ಹೆಚ್ಚು ಕಾರ್ಯನಿರತರಾಗಲಿದ್ದಾರೆ. ಬಾಲಿವುಡ್ ನ ೪ ಸಿನೆಮಾಗಳು ಹಾಗೂ ತಮಿಳು, ತೆಲುಗಿನಲ್ಲಿ ಒಂದೊಂದು ಚಿತ್ರಗಳು ೨೦೧೫ ರಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿವೆ.

ನಟ ಅಕ್ಷಯ್ ಕುಮಾರ್ ಅವರೊಂದಿಗೆ ನಟಿಸಿರುವ 'ಗಬ್ಬರ್', 'ರಾಕಿ ಹ್ಯಾಂಡ್ ಸಂ' ಹಾಗೂ ಜಾನ್ ಅಬ್ರಹಾಂ ಜೊತೆ 'ವೆಲ್ಕಂ ಬ್ಯಾಕ್' ಮತ್ತು ವಿದ್ಯುತ್ ಜಮ್ಮ್ವಾಲ್ ಎದುರು 'ಯಾರಾ' ಸಿನೆಮಾಗಳು ಬಾಲಿವುಡ್ ನಲ್ಲಿ ಬರಲಿರುವ ಸಿನೆಮಾಗಳು.

ದಕ್ಷಿಣದಲ್ಲಿ ವಿಜಯ್ ಜೊತೆಗೊಂದು ತಮಿಳು ಸಿನೆಮಾ ಹಾಗೂ ಮಹೇಶ್ ಬಾಬು ಅವರೊಂದಿಗೆ ತೆಲುಗು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇವುಗಳ ಹೆಸರುಗಳು ಇನ್ನೂ ನಿರ್ಧಾರವಾಗಬೇಕಿದೆ.

ಅಲ್ಲದೆ ಇತ್ತೀಚೆಗೆ ಅಕ್ಕಿನೇನಿ ನಾಗಾರ್ಜುನ ಮತ್ತು ಕಾರ್ತಿ ಅವರೊಂದಿಗೆ ತಮಿಳು ಮತ್ತು ತೆಲುಗಿನ ದ್ವಿಭಾಷಾ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.