3ಕೋನ ಪ್ರೇಮ
ಕನ್ನಡ ಚಿತ್ರರಂಗದಲ್ಲಿ ತ್ರಿಕೋನ ಪ್ರೇಮ ಕಥೆಗಳು ಈಗಾಗಲೇ ಸಾಕಷ್ಟು ಬಂದು ಹೋಗಿವೆ. ಲೆಕ್ಕ ಹಾಕಲು ಕೂತರೆ ಸಮಯ ಸಾಕಾಗಲ್ಲ...

ಕನ್ನಡ ಚಿತ್ರರಂಗದಲ್ಲಿ ತ್ರಿಕೋನ ಪ್ರೇಮ ಕಥೆಗಳು ಈಗಾಗಲೇ ಸಾಕಷ್ಟು ಬಂದು ಹೋಗಿವೆ. ಲೆಕ್ಕ ಹಾಕಲು ಕೂತರೆ ಸಮಯ ಸಾಕಾಗಲ್ಲ. ಅಷ್ಟು ತ್ರಿಕೋನ ಪ್ರೇಮ ಕಥೆಗಳನ್ನು ತೆರೆ ಮೇಲೆ ಕನ್ನಡ ಪ್ರೇಕ್ಷಕರು ನೋಡಿದ್ದಾರೆ. ಆದರೂ ಅಂಥ ಚಿತ್ರಗಳು ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಇದಕ್ಕೆ ಹೊಸದಾಗಿ ಸೇರಿಕೊಂಡಿರುವುದು '3ಕೆ'. ಅಂದ ಹಾಗೆ ಈಗಾಗಲೇ '3ಕೆ' ಹೆಸರಿನಲ್ಲಿ ಕನ್ನಡ ಸಾಹಿತಿಗಳ ಒಂದು ಕೂಟ ಇದೆ. ಅಂದರೆ ಕನ್ನಡ, ಕವಿತೆ, ಕಥನ ಈ ಮೂರನ್ನು ಸೇರಿಸಿ '3ಕೆ' ಎನ್ನುವ ಗ್ರೂಪ್ ಮಾಡಿಕೊಂಡಿದ್ದಾರೆ. ಈಗ 3ಕೆ ಹೆಸರಿನಲ್ಲಿ ಸಿನಿಮಾ ಕೂಡ ಬರುತ್ತಿದೆ. ಇಲ್ಲಿ 3ಕೆ ಅಂದರೆ ತ್ರೀಕೋನ ಪ್ರೇಮ ಕಥೆ. ಅರ್ಥಾತ್ ಟ್ರಯಾಂಗಲ್ ಲವ್ ಸ್ಟೋರಿ.
ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸುತ್ತಿದ್ದಾರೆ. ಕರಣ್, ಕೀರ್ತಿ ಹಾಗೂ ಕಿರಣ್ ಚಿತ್ರದ ಇಬ್ಬರು ನಾಯಕರು ಮತ್ತು ನಾಯಕಿ. ಈ ಮೂವರ ನಡುವೆ ಸಾಗುವು ಕಥೆಯೇ '3ಕೆ' ಚಿತ್ರದ್ದು. ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಮುಹೂರ್ತ ಆಚರಿಸಿಕೊಂಡ ಈ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಯಿತು. ಈಗಿನ ಯುವ ಸಮುದಾಯಕ್ಕೆ ಇಷ್ಟುವಾಗುವಂತ ಚಿತ್ರವಿದು. ಕಥೆ ತುಂಬಾ ಚೆನ್ನಾಗಿದೆ. ಅದ್ಭುತವಾದ ಕಥೆ ಇಲ್ಲಿದೆ. ಎಲ್ಲ ವರ್ಗದ ಪ್ರೇಕ್ಷಕರು ಕೂಡ ನೋಡುವಂಥ ಚಿತ್ರವಿದು ಎಂದರು ನಿರ್ದೇಶಕ ಕಂ ನಿರ್ಮಾಪಕ ಶ್ರೀನಿವಾಸ್.
ವಿಶೇಷ ಅಂದರೆ ಈ ಕಥೆಯಲ್ಲಿ ನಿರ್ದೇಶಕರ ಸ್ವಂತ ಅನುಭವಗಳು ಸೇರಿಕೊಂಡಿರುವುದು. ನಿರ್ದೇಶಕರು ನಮ್ಮ ಪಾತ್ರಗಳನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಮೂವರಿಗೂ ಮಹತ್ವ ಇದೆ. ಕಥೆ ಚೆನ್ನಾಗಿದೆ ಎಂದರು ಕರಣ್, ಕೀರ್ತಿ ಹಾಗೂ ಕಿರಣ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


