ಸಿನಿಮಾ ಸುದ್ದಿ

'ಛತ್ರಪತಿ ಶಿವಾಜಿ'ಯನ್ನು ರವಿ ಜಾಧವ್ ನಿರ್ದೇಶಿಸಲಿದ್ದಾರೆ: ರಿತೇಶ್

ಕಳೆದ ಬಾರಿಗೆ 'ಬಂಗಿಸ್ತಾನ್' ಸಿನೆಮಾದಲ್ಲಿ ಕಾಣಿಸಿಕೊಂಡ ನಟ ರಿತೇಶ್ ದೇಶಮುಖ್ ಅವರು ತಮ್ಮ ನಿರ್ಮಾಣ ಸಂಸ್ಥೆಯ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ

'ಛತ್ರಪತಿ ಶಿವಾಜಿ'ಯನ್ನು ರವಿ ಜಾಧವ್ ನಿರ್ದೇಶಿಸಲಿದ್ದಾರೆ: ರಿತೇಶ್
ನಟ ರಿತೇಶ್ ದೇಶಮುಖ್
Published On :

ಮುಂಬೈ: ಕಳೆದ ಬಾರಿಗೆ 'ಬಂಗಿಸ್ತಾನ್' ಸಿನೆಮಾದಲ್ಲಿ ಕಾಣಿಸಿಕೊಂಡ ನಟ ರಿತೇಶ್ ದೇಶಮುಖ್ ಅವರು ತಮ್ಮ ನಿರ್ಮಾಣ ಸಂಸ್ಥೆಯ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ 'ಛತ್ರಪತಿ ಶಿವಾಜಿ' ಸಿನೆಮಾವನ್ನು ರವಿ ಜಾಧವ್ ನಿರ್ದೇಶಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಜಾಧವ್ ಅವರು ಈ ಹಿಂದೆ 'ಬಾಲಕ್-ಪಾಲಕ್' ಮತ್ತು 'ಸೌಂಡ್ ಆಫ್ ಹೆವೆನ್: ದ ಸ್ಟೋರಿ ಆಫ್ ಬಾಲಗಂಧರ್ವ' ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ.

ರಿತೇಶ್ ಮತ್ತು ಅವರ ಪತ್ನಿ ಒಡೆತನದ ಮುಂಬೈ ಫಿಲ್ಮ್ ಕಾರ್ಪೊರೇಶನ್ ಈ ಸಿನೆಮಾವನ್ನು ನಿರ್ಮಾಣ ಮಾಡುತ್ತಿದೆ.

ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಘೋಷಿಸಿರುವ ನಟ "ಮುಂಬೈ ಫಿಲ್ಮ್ ಕಂಪನಿ' ರವಿ ಜಾಧವ್ ನಿರ್ದೇಶನದ ಛತ್ರಪತಿ ಶಿವಾಜಿ ನಿರ್ಮಿಸುತ್ತಿರುವುದನ್ನು ಘೋಷಿಸುವುದಕ್ಕೆ ಹೆಮ್ಮೆ ಎಂದೆನಿಸುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.

'ಮಸ್ತಿ' ನಟ ಮರಾಠಾ ಸೇನಾನಿ ಛತ್ರಪತಿ ಶಿವಾಜಿ ಪಾತ್ರವನ್ನು ನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.