ಐರಾವತ ಅರ್ಜುನ್ ಅವರ ಹೊಸ ಚಿತ್ರಕ್ಕೆ ಹೊಸ ನಟರು
ದರ್ಶನ್ ಅಭಿನಯದ 'ಐರಾವತ' ನಿರ್ದೇಶನದ ನಂತರ ಎ ಪಿ ಅರ್ಜುನ್ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು ಈ ಸಿನೆಮಾದಲ್ಲಿ ಹೊಸ ನಟರು ಕಾಣಿಸಿಕೊಳ್ಳಲಿದ್ದಾರಂತೆ.

ಬೆಂಗಳೂರು: ದರ್ಶನ್ ಅಭಿನಯದ 'ಐರಾವತ' ನಿರ್ದೇಶನದ ನಂತರ ಎ ಪಿ ಅರ್ಜುನ್ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು ಈ ಸಿನೆಮಾದಲ್ಲಿ ಹೊಸ ನಟರು ಕಾಣಿಸಿಕೊಳ್ಳಲಿದ್ದಾರಂತೆ. ಇದಕ್ಕೂ ಮುಂಚೆ ಯೋಗಿ(ಅಂಬಾರಿ) ಮತ್ತು ಧ್ರುವ್ ಸರ್ಜಾ (ಅದ್ಧೂರಿ) ಇವರುಗಳನ್ನು ನಿರ್ದೇಶಿಸಿದ್ದ ಅರ್ಜುನ್ ಹೊಸಬರ ಜೊತೆಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.
ಚಿತ್ರಿಕರಣಕ್ಕೂ ಮುಂಚಿನ ಕೆಲಸಗಳಲ್ಲಿ ನಿರತರಾಗಿರುವ ನಿರ್ದೇಶಕ "ಧ್ರುವ್ ಸರ್ಜಾ ಅವರ ಒಂದು ಸಿನೆಮಾ ನಿರ್ದೇಶಿಸಬೇಕಿತ್ತು ಆದರೆ ಅವರು 'ಭರ್ಜರಿ'ಯಲ್ಲಿ ಬ್ಯುಸಿಯಾಗಿರುವುದರಿಂದ ನಾನು ಹೊಸ ಯೋಜನೆಗೆ ಕೈಹಾಕಿದ್ದೇನೆ. ಹೊಸಬರ ಜೊತೆಗೆ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ. ಹೊಸ ಪ್ರತಿಭೆಗಳನ್ನು ಗುರುತಿಸಿವುದಕ್ಕೆ ನಾನು ಯಾವಾಗಲು ಪ್ರಯತ್ನಿಸುತ್ತಿರುತ್ತೇನೆ" ಎನ್ನುತ್ತಾರೆ ಅರ್ಜುನ್.
"ಇದು ನಿರ್ಮಾಪಕನ ಚೊಚ್ಚಲ ಪ್ರಯತ್ನ ಆದುದರಿಂದ ಹೊಸಬರ ಜೊತೆಗೆ ಕೆಲಸ ಮಾಡುವಂತೆ ಅವರೇ ಸೂಚಿಸಿದರು" ಎನ್ನುತ್ತಾರೆ ಅರ್ಜುನ್. ೨೩ ವರ್ಷದ ಹೀರೋ ಮತ್ತು ೨೦ ವರ್ಷದ ಹಿರೋಯಿನ್ ಹುಡುಕಾಟದಲ್ಲಿರುವುದಾಗಿ ಅವರು ತಿಳಿಸುತ್ತಾರೆ,.
ಫೆಬ್ರವರಿ ೧೪ರೊಳಗೆ ಆಡಿಶನ್ ಗಳನ್ನು ಮುಗಿಸಿ ಮಾರ್ಚ್ ನಿಂದ ಚಿತ್ರೀಕರಣ ಮಾಡುವ ಉಮೇದಿನಲಿದ್ದಾರೆ. ೧೨ ರಿಂದ ೧೫ ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ತಮಿಳು ಮತ್ತು ತೆಲುಗಿನಲ್ಲೂ ನಿರ್ಮಿಸಲು ನಿರ್ಮಾಪಕರು ಉತ್ಸುಕರಾಗಿದ್ದಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


