ಗಣೇಶ್ ಅಭಿನಯದ 'ಸ್ಟೈಲ್ ಕಿಂಗ್' ಆಡಿಯೋ ಬಿಡುಗಡೆ
ಪಿ ಸಿ ಶೇಖರ್ ನಿರ್ದೇಶನದ ಗಣೇಶ್ ಅಭಿನಯದ 'ಸ್ಟೈಲ್ ಕಿಂಗ್' ಸಿನೆಮಾದ ಆಡಿಯೋ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಯಿತು.
ಬೆಂಗಳೂರು: ಪಿ ಸಿ ಶೇಖರ್ ನಿರ್ದೇಶನದ ಗಣೇಶ್ ಅಭಿನಯದ 'ಸ್ಟೈಲ್ ಕಿಂಗ್' ಸಿನೆಮಾದ ಆಡಿಯೋ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಯಿತು.
ಸಿನೆಮಾಗೆ ಸಂಗೀತ ನೀಡಿರುವ ಅರ್ಜುನ್ ಜನ್ಯ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಸಿನೆಮಾದ ಪ್ರತಿಯೊಂದು ಹಾಡನ್ನು ಸಿನೆಮಾರಂಗದ ವಿವಿಧ ಗಣ್ಯರು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಇವರುಗಳಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಅಧ್ಯಕ್ಷ ಸಾ ರಾ ಗೋವಿಂದು, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷ ಗಂಗಾಧರ್, ನಿರ್ಮಾಪಕ-ವಿತರಕ ಮಹೇಶ್ ಕೊಠಾರಿ ಮತ್ತು ಹಿರಿಯ ನಟ ಸುಂದರ್ ರಾಜ್ ಕೂಡ ಒಳಗೊಂಡಿದ್ದರು.
ಅರ್ಜುನ್ ಜನ್ಯ ಅವರ ನೇರಪ್ರದರ್ಶನದಲ್ಲಿ ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಅರ್ಚನ ರವಿ, ಚೇತನ್ ನಾಯಕ್ ಮತ್ತು ಇಂದು ನಾಗರಾಜ್ 'ಸ್ಟೈಲ್ ಕಿಂಗ್' ಹಾಡುಗಳನ್ನು ಹಾಡುವ ಮೂಲಕ ಪ್ರದರ್ಶನಕ್ಕೆ ಕಳೆ ಕಟ್ಟಿದರು. ಈ ವೈಭವಯುತ ಬಿಡುಗಡೆ ಕಾರ್ಯಕ್ರಮ ಮೂರು ಘಂಟೆಗಳ ಕಾಲದವರೆಗೆ ನಡೆಯಿತು.
ಮಾರುತಿ ಜೇಡಿಯವರ್ ನಿರ್ಮಾಣದ ಈ ಚಿತ್ರದಲ್ಲಿ ಗಣೇಶ್ ಜೊತೆಗೆ ರಮ್ಯ ನಂಬೀಸನ್ ನಟಿಸಿದ್ದು ರಂಗಾಯಣ ರಘು ಮತ್ತು ಸಾಧು ಕೋಕಿಲಾ ಸಹನಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

