'ಕತ್ತಿ' ರಿಮೇಕ್ ನಲ್ಲಿ ಚಿರಂಜೀವಿ
ರಾಮ್ ಚರಣ್ ಅವರ ತೆಲುಗು ಆಕ್ಷನ್ ಚಿತ್ರ 'ಬ್ರೂಸ್ ಲೀ: ದ ಫೈಟರ್' ನಲ್ಲಿ ಅತಿಥಿ ನಟನಾಗಿ ಕೊನೆಯ ಬಾರಿ ಕಾಣಿಸಿಕೊಂಡ ಮೆಗಾಸ್ಟಾರ್ ಚಿರಂಜೀವಿ ಅವರು ತಮಿಳು ಬ್ಲಾಕ್ ಬಸ್ಟರ್

ಚೆನ್ನೈ: ರಾಮ್ ಚರಣ್ ಅವರ ತೆಲುಗು ಆಕ್ಷನ್ ಚಿತ್ರ 'ಬ್ರೂಸ್ ಲೀ: ದ ಫೈಟರ್' ನಲ್ಲಿ ಅತಿಥಿ ನಟನಾಗಿ ಕೊನೆಯ ಬಾರಿ ಕಾಣಿಸಿಕೊಂಡ ಮೆಗಾಸ್ಟಾರ್ ಚಿರಂಜೀವಿ ಅವರು ತಮಿಳು ಬ್ಲಾಕ್ ಬಸ್ಟರ್ 'ಕತ್ತಿ'ಯ ರಿಮೇಕ್ ನಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳಲಿದ್ದಾರೆ.
"ಈ ಯೋಜನೆ ಅಂತಿಮವಾಗಿದೆ. ಇದು 'ಕತ್ತಿ'ಯ ಅಧಿಕೃತ ರಿಮೇಕ್ ಮತ್ತು ಈ ಸಿನೆಮಾವನ್ನು ವಿ ವಿ ವಿನಾಯಕ್ ನಿರ್ದೇಶಿಸಲಿದ್ದಾರೆ" ಎಂದು ರಾಮಚರಣ್ ಅವರ ಹತ್ತಿರದ ಮೂಲಗಳು ತಿಳಿಸಿದ್ದಾರೆ.
ಇದು ಚಿರಂಜೀವಿ ಅವರ ೧೫೧ ನೆ ಚಿತ್ರವಾಗಲಿದ್ದು ಮುಂದಿನ ವರ್ಷದ ಮೊದಲ ಭಾಗದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಈ ಸಿನೆಮಾಗೆ ರಾಮ ಚರಣ್ ಮೊದಲ ಬಾರಿಗೆ ನಿರ್ಮಪಕರಾಗಲಿದ್ದಾರೆ.
ಮೂಲದಲ್ಲಿ ಎ ಆರ್ ಮುರಗದಾಸ್ ನಿರ್ದೇಶನದ ಈ ಚಿತ್ರ ಬಹುದೇಶಿ ಸಂಸ್ಥೆಗಳಿಂದ ರೈತರು ಅನುಭವಿಸುವ ಬವಣೆಗಳನ್ನು ಚಿತ್ರಿಸಿತ್ತು.
ತೆಲುಗು ಚಿತ್ರದ ಉಳಿದ ನಟರನ್ನು ಅಂತಿಮಗೊಳಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


