ಸಿನಿಮಾ ಸುದ್ದಿ

ಪ್ರೇಮ್ ನಿರ್ದೇಶದ ಶಿವಣ್ಣ-ಸುದೀಪ್ ಅಭಿನಯದ ಚಿತ್ರಕ್ಕೆ 'ಕಲಿ' ಟೈಟಲ್

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ...

ಪ್ರೇಮ್ ನಿರ್ದೇಶದ ಶಿವಣ್ಣ-ಸುದೀಪ್ ಅಭಿನಯದ ಚಿತ್ರಕ್ಕೆ 'ಕಲಿ' ಟೈಟಲ್
ಕಲಿ
Published On :
ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ 100 ಕೋಟಿ ಬಜೆಟ್ ಸಿನಿಮಾಕ್ಕೆ 'ಕಲಿ' ಎಂದು ಟೈಟಲ್ ಇಡಲಾಗಿದೆ.
ಜೋಗಿ ಖ್ಯಾತಿಯ ಪ್ರೇಮ್ ಮೊದಲ ಬಾರಿಗೆ ಮಲ್ಟಿ ಸ್ಟಾರ್ ಗಳನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಗಿಮೀಕ್ ಮೂಲಕವೇ ತಮ್ಮ ಚಿತ್ರವನ್ನು ಹಿಟ್ ಲಿಸ್ಟ್ ಗೆ ಸೇರಿಸುವುದನ್ನು ಕರಗತ ಮಾಡಿಕೊಂಡಿರುವ ಪ್ರೇಮ್ ತಮ್ಮ ಮುಂದಿನ ಹೈ ಬಜೆಟ್ ಚಿತ್ರದ ಆರಂಭವನ್ನು ತಮ್ಮದೇ ಸ್ಟೈಲ್ ನಲ್ಲಿ ಮಾಡಿದ್ದಾರೆ. ಈ ಮೂಲಕ ಚಿತ್ರ ಪ್ರತಿ ಹಂತದಲ್ಲಿಯೂ ಪ್ರಚಾರ ಪಡೆಯುವುದು ಅವರ ತಂತ್ರವಾಗಿದೆ.
ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳನ್ನು ಒಂದೇ ತೆರೆ ಮೇಲೆ ತರಲಿರುವ ಪ್ರೇಮ್ ಮುಂದೆ ಯಾವ ಕಮಾಲ್ ಮಾಡುತ್ತಾರೋ ನೋಡಬೇಕು. ಚಿತ್ರಕ್ಕೆ ಕಲಿ ಎಂದು ಹೆಸರಿಡುವ ಮೂಲಕ ಕಲಿಯುಗ ಚಿತ್ರಣವನ್ನು ಕಣ್ಣ ಮುಂದೆ ತರುತ್ತಾರೋ ಕಾದು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.