ಸಿನಿಮಾ ಸುದ್ದಿ

ಹುಟ್ಟು ಹಬ್ಬ ರದ್ದುಗೊಳಿಸಿದ ರಜನಿ, ನೆರೆ ಸಂತ್ರಸ್ತರಿಗೆ 10 ಕೋಟಿ ದೇಣಿಗೆ

ಜಲಪ್ರಳಯದ ಹಿನ್ನೆಲೆಯಲ್ಲಿ ಕೊಲಿವುಡ್ ಸೂಪರ್ ಸ್ಟಾರ್ ರಜನಿತಕಾಂತ್ ಅವರು ತಮ್ಮ 65ನೇ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು...

ಹುಟ್ಟು ಹಬ್ಬ ರದ್ದುಗೊಳಿಸಿದ ರಜನಿ, ನೆರೆ ಸಂತ್ರಸ್ತರಿಗೆ 10 ಕೋಟಿ ದೇಣಿಗೆ
ರಜನಿಕಾಂತ್
Published On :

ಚೆನ್ನೈ: ಜಲಪ್ರಳಯದ ಹಿನ್ನೆಲೆಯಲ್ಲಿ ಕೊಲಿವುಡ್ ಸೂಪರ್ ಸ್ಟಾರ್ ರಜನಿತಕಾಂತ್ ಅವರು ತಮ್ಮ 65ನೇ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಅದರ ಬದಲು ಚೆನ್ನೈನೆರೆ ಸಂತ್ರಸ್ತರಿಗೆ ನೆರವಾಗಲು 10 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ.

ಇಂದು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಭೇಟಿ ಮಾಡಿದ ತಮಿಳು ಸೂಪರ್ ಸ್ಟಾರ್, ಸಿಎಂ ಪರಿಹಾರ ನಿಧಿಗೆ 10 ಕೋಟಿ ರುಪಾಯಿ ಚೆಕ್ ನೀಡಿದರು.

ಡಿಸೆಂಬರ್ 12ಕ್ಕೆ 65ನೇ ವಸಂತಕ್ಕೆ ಕಾಲಿಡುತ್ತಿರುವ ರಜನಿಕಾಂತ್ ಅವರು ಈ ಮುಂಚೆ ನೆರೆ ಸಂತ್ರಸ್ತರಿಗೆ 10 ಲಕ್ಷ ರುಪಾಯಿ ದೇಣಿಗೆ ನೀಡಿದ್ದರು. ಇದೀಗ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಮತ್ತೆ 10 ಕೋಟಿ ರುಪಾಯಿ ನೀಡಿದ್ದಾರೆ.

ಶತಮಾನದ ಮಹಾಮಳೆಯಿಂದಾಗಿ ತಮಿಳು ನಾಡು ಈಗಷ್ಟೇ ಸಹಜ ಸ್ಥಿತಿಗೆ ಮರಳುತ್ತಿರುವ ಈ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬವನ್ನು ವೈಭವಪೂರಿತವಾಗಿ ಆಚರಿಸದಿರುವಂತೆ ರಜನಿಕಾಂತ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಪರಿಹಾರ ಕಾರ್ಯಕ್ಕೆ ಕೈಜೋಡಿಸುವಂತೆ ಕೇಳಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.