ಸುದೀಪ್-ಶಿವಣ್ಣ ಹಾಗೂ ಸಿದ್ದು-ಎಚ್ ಡಿಕೆ ಒಂದುಗೂಡಿಸಿದ ಸಿನೆಮಾ!
ಸಿನೆಮಾಗೆ ರಾಜಕೀಯ ಭಾಷೆ ಇಲ್ಲವೆಂಬುದಕ್ಕೆ ಇಲ್ಲಿದೆ ಉದಾಹರಣೆ. ಸಿ ಆರ್ ಮನೋಹರ್ ನಿರ್ಮಾಣದ ಸಿನೆಮಾಗೆ ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ

ಬೆಂಗಳೂರು: ಸಿನೆಮಾಗೆ ರಾಜಕೀಯ ಭಾಷೆ ಇಲ್ಲವೆಂಬುದಕ್ಕೆ ಇಲ್ಲಿದೆ ಉದಾಹರಣೆ. ಸಿ ಆರ್ ಮನೋಹರ್ ನಿರ್ಮಾಣದ ಸಿನೆಮಾಗೆ ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ ತರಲು ಯಶಸ್ವಿಯಾಗಿರುವ ನಿರ್ದೇಶಕ ಪ್ರೇಮ್ ಈಗ ವಿರೋಧಿ ರಾಜಕೀಯ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜನತಾ ದಳ ಜಾತ್ಯಾತೀತ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರನ್ನು ಕೂಡ ಒಗ್ಗೂಡಿಸಲಿದ್ದಾರಂತೆ.
ಈ ಇಬ್ಬರೂ ರಾಜಕೀಯ ನಾಯಕರು ಒಟ್ಟಿಗೆ ಸಿನೆಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಡಿಸೆಂಬರ್ ೧೩ ರಂದು ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಮನೋಹರ್ ಅವರು ವಿಧಾನ ಪರಿಷತ್ತಿನ ಅಭ್ಯರ್ಥಿಯಾಗಿರುವುದರಿಂದ ಇನ್ನೂ ಹೆಚ್ಚಿನ ರಾಜಕಾರಿಣಿಗಳು ಸೇರುವ ಸೂಚನೆಯಿದೆ.
ಸಿನೆಮಾ ಬಗ್ಗೆ ತುಟಿಬಿಚ್ಚದ ನಿರ್ದೇಶಕ ಪ್ರೇಮ್ ಇದು ಸಾಮಾನ್ಯವಾದ ಸಿನೆಮಾ ಅಲ್ಲ ಎಂದಷ್ಟೇ ಹೇಳುತ್ತಾರೆ. ೧೦೦ ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಲಿರುವ ಈ ಸಿನೆಮಾಗೆ ಇನ್ನೂ ಇತರೆ ದೊಡ್ಡ ನಟರ ತಾರಾಗಣವೆ ಇರಲಿದೆ ಎನ್ನಲಾಗಿದೆ. ಇದು ಬಹುಭಾಷಾ ಚಲನಚಿತ್ರವಾಗಿದ್ದು ಹೊಸವರ್ಷಕ್ಕೆ ಚಿತ್ರೀಕರಣ ಪ್ರಾರಂಭವಗಲಿದೆಯಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


