ಸಿನಿಮಾ ಸುದ್ದಿ

ಚೆನ್ನೈ ಪ್ರವಾಹಕ್ಕೆ ನೆರವಾದ ಬೆಂಗಳೂರಿಗೆ ಧನ್ಯವಾದ ಹೇಳಿದ ನಟ ವಿಶಾಲ್

ಕುಂಭದ್ರೋಣ ಮಳೆಗೆ ತತ್ತರಿಸಿ ಪ್ರವಾಹಕ್ಕೆ ತುತ್ತಾಗಿರುವ ಚೆನ್ನೈ ಜನತೆಗೆ ನಿರೀಕ್ಷೆ ಮೀರಿ ಸಹಾಯ ಮಾಡಿದ ಬೆಂಗಳೂರಿಗರಿಗೆ ತಮಿಳು ನಟ ವಿಶಾಲ್ ಧನ್ಯವಾದ ಹೇಳಿದ್ದಾರೆ...

ಚೆನ್ನೈ ಪ್ರವಾಹಕ್ಕೆ ನೆರವಾದ ಬೆಂಗಳೂರಿಗೆ ಧನ್ಯವಾದ ಹೇಳಿದ ನಟ ವಿಶಾಲ್
ನಟ ವಿಶಾಲ್ (ಸಂಗ್ರಹ ಚಿತ್ರ)
Published On :

ಚೆನ್ನೈ: ಕುಂಭದ್ರೋಣ ಮಳೆಗೆ ತತ್ತರಿಸಿ ಪ್ರವಾಹಕ್ಕೆ ತುತ್ತಾಗಿರುವ ಚೆನ್ನೈ ಜನತೆಗೆ ನಿರೀಕ್ಷೆ ಮೀರಿ ಸಹಾಯ ಮಾಡಿದ ಬೆಂಗಳೂರಿಗರಿಗೆ ತಮಿಳು ನಟ ವಿಶಾಲ್ ಧನ್ಯವಾದ ಹೇಳಿದ್ದಾರೆ.

ಬೆಂಗಳೂರಿನಿಂದ ಚೆನ್ನೈಗೆ ಬಂದ ಪರಿಹಾರ ಸಾಮಗ್ರಿ ತುಂಬಿದ ಲಾರಿಗಳನ್ನು ಸ್ವತಃ ತಾವೇ ಬರ ಮಾಡಿಕೊಂಡ ನಟ ವಿಶಾಲ್ ಮತ್ತು ತಂಡದ ಸಿಬ್ಬಂದಿಗಳು ನೇರವಾಗಿ ಅವರೇ ಚೆನ್ನೈ ಜನತೆಗೆ ವಿತರಣೆ ಮಾಡುತ್ತಿದ್ದಾರೆ. ಈ ವೇಳೆ ಮಾತನಾಡಿದ ನಟ ವಿಶಾಲ್ ಬೆಂಗಳೂರಿಗರ ನೆರವನ್ನು ಮನದುಂಬಿ ಕೊಂಡಾಡಿದ್ದು, "ನಿರೀಕ್ಷೆ ಮೀರಿ ಚೆನ್ನೈಗೆ ಬೆಂಗಳೂರಿನಿಂದ ನೆರವು ಹರಿದುಬರುತ್ತಿದೆ. ಆದರೆ ಮತ್ತಷ್ಟು ಅಗತ್ಯ ವಸ್ತುಗಳು ಬೇಕಿದ್ದು, ವೈದ್ಯಕೀಯ ಪರಿಕರಗಳು ಮತ್ತು ಅಗತ್ಯ ವಸ್ತಗಳು ಬೇಕಿದೆ ಎಂದು ಇದೇ ವೇಳೆ ಮನವಿ ಮಾಡಿಕೊಂಡಿದ್ದಾರೆ.

ಪ್ರವಾಹ ಪೀಡಿತ ಚೆನ್ನೈಗೆ ಬೆಂಗಳೂರಿನ ವಿವಿಧ ಸಂಘ-ಸಂಸ್ಥೆಗಳು ಸಾಕಷ್ಟು ಪ್ರಮಾಣದಲ್ಲಿ ಪರಿಹಾರ ಸಾಮಗ್ರಿಗಳನ್ನು ಶೇಖರಿಸಿ ರವಾನಿಸುತ್ತಿದ್ದು, ಮತ್ತಷ್ಟು ದಿನಗಳ ಕಾಲ ಪರಿಹಾರ ಸಾಮಗ್ರಿಗಳ ಶೇಖರಣೆ ಮತ್ತು ರವಾನೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.