'ಬಾಕ್ಸರ್' ಆಡಿಯೋ ಬಿಡುಗಡೆಗೆ ಸಜ್ಜು
ನಟ ಧನಂಜಯ್ ಮತ್ತು ಕೃತಿಕ ಜಯಕುಮಾರ್ ನಟಿಸಿರುವ, ಪ್ರೀತಂ ಗುಬ್ಬಿ ನಿರ್ದೇಶನದ 'ಬಾಕ್ಸರ್' ಚಲನಚಿತ್ರದ ಆಡಿಯೋ ಅನಾವರಣಕ್ಕೆ ಸಿದ್ಧತೆಗಳು ಭರದಿಂದ

ಬೆಂಗಳೂರು: ನಟ ಧನಂಜಯ್ ಮತ್ತು ಕೃತಿಕ ಜಯಕುಮಾರ್ ನಟಿಸಿರುವ, ಪ್ರೀತಂ ಗುಬ್ಬಿ ನಿರ್ದೇಶನದ 'ಬಾಕ್ಸರ್' ಚಲನಚಿತ್ರದ ಆಡಿಯೋ ಅನಾವರಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಗುರುವಾರ ನಡೆಯಲಿವ ಆಡಿಯೋ ಅನಾವರಣಕ್ಕೂ ಮುಂಚೆ ನಿರ್ದೇಶಕ ಸಿನೆಮಾದ ಮೂರು ಹಾಡುಗಳ ಒಂದು ನಿಮಿಷದ ಟೀಸರ್ ಗಳನ್ನು ಬಿಡುಗಡೆ ಮಾಡಿದ್ದಾರೆ.
ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಸಂಗೀತ ಸಿನೆಮಾದ ಜೀವ ಮತ್ತು ಆತ್ಮ ಎನ್ನುವ ಪ್ರೀತಂ "ಬಾಕ್ಸರ್ ನ ಹೀರೋಗಳಲ್ಲಿ ಅವರೂ ಒಬ್ಬರು ಹಾಗೆಯೇ ಸಿನೆಮ್ಯಾಟೋಗ್ರಾಪಹರ್ ಪ್ರೀತ ಜಯರಾಂ ಮತ್ತು ಉಳಿದ ತಾಂತ್ರಿಕ ವರ್ಗ" ಎನ್ನುತ್ತಾರೆ ಪ್ರೀತಮ್.
"ಬಾಕ್ಸರ್ ಮತ್ತು ಪ್ರೇಯಸಿಯ ನಡುವಿನ ಉನ್ನತ ಪ್ರೀತಿಯನ್ನು ಸಂಗೀತ ಹಿಡಿದಿಡುತ್ತದೆ. ಕೊನೆಯವರೆಗೆ ಸಿನೆಮಾ ಸಂಗೀತ ಮತ್ತು ಹಿನ್ನಲೆ ಸಂಗೀತ ಪ್ರೇಕ್ಷಕರನ್ನು ಕಾಡುತ್ತದೆ" ಎನ್ನುತ್ತಾರೆ.
ಸಿನೆಮಾ ಬಿಡುಗಡೆಗೂ ಆಗಲೇ ಸಿದ್ಧತೆ ನಡೆಯುತ್ತಿದೆ ಎನ್ನುವ ಅವರು "ನಿರ್ಮಾಪಕ ಮತ್ತು ವಿತರಕ ಜಯಣ್ಣ ಬಿಡುಗಡೆ ದಿನಾಂಕ ನಿಗದಿ ಮಾಡಲಿದ್ದಾರೆ. ಅದರ ಬಗ್ಗೆ ನಾನು ಚಿಂತಿಸಿಲ್ಲ. ಆದರೆ ಬಹುಶಃ ಗಣೇಶ ಚತುರ್ಥಿಯ ವೇಳೆಗೆ ಸಿನೆಮಾ ಬಿಡುಗಡೆಯಾಗುವ ಸಾಧ್ಯತೆ ಇದೆ" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


