ಸಿನಿಮಾ ಸುದ್ದಿ

ಐಟಮ್ ಡ್ಯಾನ್ಸ್ 'ಇಲಿಯಾನಾ'ಗೆ ೧.೫ ಕೋಟಿ?

ರಾಮ್ ಚರಣ ಅವರ ಮುಂದಿನ ತೆಲುಗು ಚಿತ್ರ 'ಬ್ರೂಸ್ ಲೀ' ನಲ್ಲಿ ಐಟಮ್ ಡ್ಯಾನ್ಸ್ ಒಂದಕ್ಕೆ ಹೆಜ್ಜೆ ಹಾಕಲು ನಟಿ ಇಲಿಯಾನ ಡಿ ಕ್ರ್ಯೂಜ್ ಅವರಿಗೆ ೧.೫ ಕೋಟಿ ಆಫರ್

ಐಟಮ್ ಡ್ಯಾನ್ಸ್ 'ಇಲಿಯಾನಾ'ಗೆ ೧.೫ ಕೋಟಿ?
ನಟಿ ಇಲಿಯಾನ ಡಿ ಕ್ರ್ಯೂಜ್
Published On :

ಚೆನ್ನೈ: ರಾಮ್ ಚರಣ ಅವರ ಮುಂದಿನ ತೆಲುಗು ಚಿತ್ರ 'ಬ್ರೂಸ್ ಲೀ' ನಲ್ಲಿ ಐಟಮ್ ಡ್ಯಾನ್ಸ್ ಒಂದಕ್ಕೆ ಹೆಜ್ಜೆ ಹಾಕಲು ನಟಿ ಇಲಿಯಾನ ಡಿ ಕ್ರ್ಯೂಜ್ ಅವರಿಗೆ ೧.೫ ಕೋಟಿ ಆಫರ್ ಮಾಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

"'ಬ್ರೂಸ್ ಲೀ' ಸಿನೆಮಾದ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಲು ಇಲಿಯಾನ ಅವರನ್ನು ಸಂಪರ್ಕಿಸಿ ೧.೫ ಕೋಟಿ ಆಫರ್ ನೀಡಲಾಗಿದೆ. ಆದರೆ ನಟಿ ಇನ್ನೂ ಒಪ್ಪಿಕೊಂಡಿಲ್ಲ" ಎಂದು ಚಲನಚಿತ್ರದ ಮೂಲಗಳು ತಿಳಿಸಿವೆ.

ಶ್ರೀನು ವೈಟ್ಲ ನಿರ್ದೇಶನದ ಈ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಕೂಡ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬ್ರೂಸ್ ಲೀ ಅಡ್ಡಹೆಸರೊತ್ತ ಆಕ್ಷನ್ ಹೀರೋ ಆಗಿ ರಾಮ್ ಚರಣ ಕಾಣಿಸಿಕೊಳ್ಳಲಿದ್ದಾರೆ.

೨೦೧೨ ರಲ್ಲಿ "ದೇವುಡು ಚೇಸಿನ ಮನುಷ್ಯಲು' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ಇಲಿಯಾನ ಕಳೆದ ವಾರ ಚಿರಂಜೀವಿ ಹುಟ್ಟುಹಬ್ಬದ ಸಂಭ್ರಮಕ್ಕೆ ಹೈದರಾಬಾದಿಗೆ ಬಂದಿದ್ದರು. ಆಸಕ್ತಿದಾಯಕ ಪಾತ್ರ ಸಿಕ್ಕರೆ ತೆಲುಗು ಚಿತ್ರರಂಗಕ್ಕೆ ವಾಪಸ್ ಬರುವುದಾಗಿ ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.