ಸಿನಿಮಾ ಸುದ್ದಿ

ದಿಗಂತ್ ಅಭಿನಯದ 'ವೆಡ್ಡಿಂಗ್ ಪಲಾವ್' ಟ್ರೇಲರ್ ಅನಾವರಣ ಮಾಡಿದ ಆಲಿಯಾ

ಬಾಲಿವುಡ್ ನಟಿ ಆಲಿಯಾ ಭಟ್, ಅನುಷ್ಕಾ ರಂಜನ್ ಅವರ ಅಭಿನಯದ ಚೊಚ್ಚಲ ಸಿನೆಮಾ 'ವೆಡ್ಡಿಂಗ್ ಪಲಾವ್' ಸಿನೆಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಿಡುಗಡೆ

ದಿಗಂತ್ ಅಭಿನಯದ 'ವೆಡ್ಡಿಂಗ್ ಪಲಾವ್' ಟ್ರೇಲರ್ ಅನಾವರಣ ಮಾಡಿದ ಆಲಿಯಾ
'ವೆಡ್ಡಿಂಗ್ ಪಲಾವ್' ಚಿತ್ರದಲ್ಲಿ ಅನುಷ್ಕಾ ಮತ್ತು ದಿಗಂತ್
Published On :

ಬಾಲಿವುಡ್ ನಟಿ ಆಲಿಯಾ ಭಟ್, ಅನುಷ್ಕಾ ರಂಜನ್ ಅವರ ಅಭಿನಯದ ಚೊಚ್ಚಲ ಸಿನೆಮಾ 'ವೆಡ್ಡಿಂಗ್ ಪಲಾವ್' ಸಿನೆಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಿಡುಗಡೆ ಮಾಡಿದ್ದಾರೆ. ಈ ಸಿನೆಮಾದ ನಾಯಕ ನಟ ಕನ್ನಡಿಗ ಗುಳಿ ಕೆನ್ನೆಯ ಸುಂದರ ದಿಗಂತ್.

ಟ್ರೇಲರ್ ಅನಾವರಣದಲ್ಲಿ ಭಾಗಿಯಾದುದ್ದಕ್ಕೆ ವಿವರಣೆ ನೀಡಿದ ಆಲಿಯಾ, "ಅನುಷ್ಕಾ ಮತ್ತು ಅವಳ ಸಹೋದರಿ ಕಂಚಿ ಮತ್ತು ನಾನು ಸಣ್ಣವರಿದ್ದಾಗ ನಟ-ನಟಿ ಆಟ ಆಡುತ್ತಿದ್ದೊ. ಅದು ಹೇಗೋ ಯಾವಾಗಲು ನಾನು ನಾಯಕನಟನಾಗಿರುತ್ತಿದ್ದೆ. ಅದಕ್ಕೆ ನಾನು ಹೀಗೆ ಡ್ರೆಸ್ ಮಾಡಿಕೊಂಡಿದ್ದೇನೆ" ಎಂದಿದ್ದಾರೆ.

ಆಲಿಯಾ ಅವರ ತಂದೆ ನಿರ್ದೇಶಕ ಮಹೇಶ್ ಭಟ್ ಕೂಡ ಅನುಷ್ಕಾ ಅವರಿಗೆ ಶುಭಾಷಯ ಕೋರಿದ್ದಾರೆ. ಈ ಸಿನೆಮಾವನ್ನು ಅನುಷ್ಕಾ ಅವರ ಪೋಷಕರಾದ ಅನು ಮತ್ತು ಶಶಿ ರಂಜನ್ ನಿರ್ಮಿಸುತ್ತಿದ್ದಾರೆ.

ದಿಗಂತ್ ಅವರಿಗೆ ಇದು ಮೊದಲ ಬಾಲಿವುಡ್ ಸಿನೆಮಾ. ರಂಗ್ ದೆ ಬಸಂತಿ, ಭಾಗ್ ಮಿಲ್ಕಾ ಭಾಗ್ ಮತ್ತು ೨ ಸ್ಟೇಟ್ಸ್ ಸಿನೆಮಾಗಳಲ್ಲಿ ಸಿನೆಮ್ಯಾಟೊಗ್ರಾಫರ್ ಆಗಿದ್ದ ಬಿನೋದ್ ಪ್ರಧಾನ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಈ ಕಾರ್ಯಕ್ರಮದಲ್ಲಿ ತಾರೆಯರಾದ ಶತ್ರುಘ್ನ ಸಿನ್ಹಾ, ಜಿತೇಂದ್ರ, ಜಾಕಿ ಶ್ರಾಫ್, ಸಂಜಯ್ ಕಪೂರ್, ಶಕ್ತಿ ಕಪೂರ್ ಮತ್ತು ಡೇವಿಡ್ ಧವನ್ ಕೂಡ ಕಾಣಿಸಿಕೊಂಡರು.

ಇಲ್ಲಿದೆ ಟ್ರೇಲರ್ ನೋಡಿ.  



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.