'ಜಗ್ಗು ದಾದಾ'ಗೆ ದರ್ಶನ್ ಜೊತೆ ಮಜಾ ಸೃಜಾ
ಕಿರುತೆರೆಯ 'ಮಜಾ ಟಾಕೀಸ್' ಎಂಬ ಜನಪ್ರಿಯ ರಿಯಾಲಿಟಿ ಶೋನಲ್ಲಿ ತಮ್ಮ ಚೇಷ್ಟೆಗಳ ಮೂಲಕ ಮನೆಮಾತಾಗಿರುವ ಸೃಜನ್ ಲೋಕೇಶ್ ಮತ್ತೆ ಬೆಳ್ಳಿತೆರೆಯತ್ತ

ಬೆಂಗಳೂರು: ಕಿರುತೆರೆಯ 'ಮಜಾ ಟಾಕೀಸ್' ಎಂಬ ಜನಪ್ರಿಯ ರಿಯಾಲಿಟಿ ಶೋನಲ್ಲಿ ತಮ್ಮ ಚೇಷ್ಟೆಗಳ ಮೂಲಕ ಮನೆಮಾತಾಗಿರುವ ಸೃಜನ್ ಲೋಕೇಶ್ ಮತ್ತೆ ಬೆಳ್ಳಿತೆರೆಯತ್ತ ಮುಖ ಮಾಡಿದ್ದಾರೆ. ಅವರು ತಮ್ಮ ಗೆಳೆಯ ದರ್ಶನ್ ಅವರೊಂದಿಗೆ 'ಜಗ್ಗು ದಾದಾ' ಸಿನೆಮಾದಲ್ಲಿ ತಮ್ಮ ಕಾಮಿಡಿ ಮ್ಯಾಜಿಕ್ ತೋರಿಸಲಿದ್ದಾರಂತೆ.
ರಾಘವೇಂದ್ರ ಹೆಗಡೆ ನಿರ್ದೇಶನದ ಈ ಚಿತ್ರದಲ್ಲಿ ನಟಿಸುತ್ತಿರುವುದನ್ನು ಧೃಢೀಕರಿಸಿರುವ ಸೃಜನ್ "ಇದು ಚಂದದ ಸ್ಕ್ರಿಪ್ಟ್, ನನಗೆ ಪಾತ್ರ ಸಿಕ್ಕಿರುವುದಕ್ಕೆ ಧನ್ಯ. ದರ್ಶನ್ ಜೊತೆಗೆ ಒಳ್ಳೆಯ ಸಂಬಂಧ ಇದೆ ಮತ್ತು ಅವರ ನವಗ್ರಹ ಮತ್ತು ಚಿಂಗಾರಿ ಸಿನೆಮಾಗಳಲ್ಲಿ ಕೆಲಸ ಮಾಡಿದ್ದೇನೆ. ತಂಡವನ್ನು ಮುಂಬೈನಲ್ಲಿ ಸೇರಿಕೊಳ್ಳುತ್ತೇನೆ ಮತ್ತು ಅಲ್ಲಿ ೧೫ ದಿನ ಚಿತ್ರೀಕರಣ ಇರುತ್ತದೆ" ಎಂದಿದ್ದಾರೆ.
ಅಲ್ಲದೆ ಮಜಾ ಟಾಕೀಸ್ ಕಾರ್ಯಕ್ರಮದ ೫೦ನೆಯ ಭಾಗಕ್ಕೆ ದರ್ಶನ್ ಅವರು ಬಂದಿರುವುದರಿಂದ ಸೃಜನ್ ತುಂಬಾ ಖುಷಿಯಾಗಿದ್ದಾರೆ. "ನಾನು ಬಿಗ್ ಬಾಸ್ ಮುಗಿಸಿದ ನಂತರ ಮೈಸೂರಿನಲ್ಲಿ ವಿರಾಮದಲ್ಲಿದ್ದಾಗ ದರ್ಶನ್ ಅವರನ್ನು ಭೇಟಿ ಮಾಡಿ ಮಜಾ ಟಾಕೀಸ್ ಬಗ್ಗೆ ತಿಳಿಸಿದ್ದೆ. ಮೊದಲ ಭಾಗಕ್ಕೇ ಅವರು ಬರಬೇಕಿತ್ತು ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ ೫೦ನೆ ಎಪಿಸೋಡಿಗೆ ಬರುತ್ತಿರುವುದ ನನಗೆ ಸಂತಸ ತಂದಿದೆ. ಜನ ಕಿರುತೆರೆಯಲ್ಲಿ ದರ್ಶನ್ ಅವರನ್ನು ಇಷ್ಟ ಪಡುತ್ತಾರೆ" ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


