'ಜಗ್ಗು ದಾದಾ' ದರ್ಶನ್ ಎದುರು ದೀಕ್ಷಾ ಸೇಥ್
ನಿರ್ದೇಶಕ ರಾಘವೇಂದ್ರ ಹೆಗಡೆ ತಮ್ಮ ಚೊಚ್ಚಲ ನಿರ್ದೇಶನದ 'ಜಗ್ಗು ದಾದಾ' ಸಿನೆಮಾದ ನಾಯಕ ನಟಿಯ ಶೋಧನೆ ಮುಗಿಸಿದ್ದಾರೆ. ಹಲವಾರು ತಿಂಗಳ

ಬೆಂಗಳೂರು: ನಿರ್ದೇಶಕ ರಾಘವೇಂದ್ರ ಹೆಗಡೆ ತಮ್ಮ ಚೊಚ್ಚಲ ನಿರ್ದೇಶನದ 'ಜಗ್ಗು ದಾದಾ' ಸಿನೆಮಾದ ನಾಯಕ ನಟಿಯ ಶೋಧನೆ ಮುಗಿಸಿದ್ದಾರೆ. ಹಲವಾರು ತಿಂಗಳ ಹುಡುಕಾಟದ ನಂತರ ಕೊನೆಗೆ ತೆಲುಗು ಮತ್ತು ತಮಿಳು ಸಿನೆಮಾಗಳಲ್ಲಿ ಅತಿ ಬ್ಯುಸಿ ಇರುವ ನಟಿ ದೀಕ್ಷಾ ಸೇಥ್ ಅವರನ್ನು ಆಯ್ಕೆ ಮಾಡಿದ್ದಾರೆ.
"ನಾನು ಮುದ್ದು ಮುಖ ಇರುವ ಹಾಗು ಚೆನ್ನಾಗಿ ನಟಿಸಲಬಲ್ಲ ನಾಯಕಿಯ ಹುಡುಕಾಟದಲ್ಲಿದ್ದೆ. ಇದಕ್ಕೆ ದೀಕ್ಷಾ ಸರಿಯಾಗಿ ಹೊಂದಾಣಿಕೆಯಾಗುತ್ತಾರೆ. ಅವರಲ್ಲಿ ಭಾರತೀಯತೆ ಮತ್ತು ವಿದೇಶಿಯತೆಯ ಮಿಳಿತ ಇದೆ. ಅವರು ದರ್ಶನ್ ಅವರ ಎತ್ತರವನ್ನು ಕೂಡ ಸರಿದೂಗಿಸುತ್ತಾರೆ. ಅಲ್ಲದೆ ಅವರು ನಮಗೆ ಸಂಪೂರ್ಣ ಸಮಯವನ್ನು ಆಗಲೇ ನೀಡಿದ್ದಾರೆ" ಎನ್ನುತ್ತಾರೆ ರಾಘವೇಂದ್ರ.
೨೦೦೯ರ ಫೆಮಿನಾ ಮಿಸ್ ಇಂಡಿಯದ ಅಂತಿಮ ಘಟ್ಟದ ಅಭ್ಯರ್ಥಿ ದೀಕ್ಷಾ, ತೆಲುಗು ಸಿನೆಮಾ 'ವೇದಂ' ಮೂಲಕ ಬೆಳ್ಳಿ ತೆರೆಗೆ ಬಂದವರು. ನಂತರ ಹಲವಾರು ತೆಲುಗು ಮತ್ತು ತಮಿಳು ಸಿನೆಮಾಗಳಲ್ಲಿ ನಟಿಸಿದ್ದು, ಬಾಲಿವುಡ್ ನಲ್ಲೂ ನಟಿಸುತ್ತಿದ್ದಾರೆ.
ಈ ಮಧ್ಯೆ ನಿರ್ದೇಶಕ ಮತ್ತೊಬ್ಬ ನಟಿಯನ್ನು ಅಂತಿಮಗೊಳಿಸುವ ಹಂತದಲ್ಲಿದ್ದಾರೆ ಹಾಗು ಆಗಸ್ಟ್ ೧೯ರಿಂದ ಮುಂಬೈನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.
ಊರ್ವಶಿ, ರಾಜ್ ಸಿಂಗ್ ಬೇಡಿ, ರವಿಶಂಕರ್, ಶರತ್ ಲೋಹಿತಾಶ್ವ ಮತ್ತು ಬುಲೆಟ್ ಪ್ರಕಾಶ್ ಸಿನೆಮಾದ ಇತರ ನಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


