ತಮಿಳು ಚಿತ್ರದಲ್ಲಿ ರಜನಿ ಜೊತೆ ನಟಿಸಲಿರುವ ರಾಧಿಕಾ ಆಪ್ಟೆ
ಅತಿ ಕಡಿಮೆ ಸಮಯದಲ್ಲಿ ಜನಪ್ರಿಯತೆಯ ಉತ್ತುಂಗಕೇರಿದ ರಾಧಿಕಾ ಆಪ್ಟೆ ಅವರ ವೃತ್ತಿಪರ ಜೀವನದಲ್ಲಿ ಮತ್ತೊಂದು ಪ್ರಮುಖ ಘಟ್ಟ. ಅವರು ತಮಿಳು ಚಿತ್ರವೊಂದರಲ್ಲಿ ಸೂಪರ್ ಸ್ಟಾರ್

ಅತಿ ಕಡಿಮೆ ಸಮಯದಲ್ಲಿ ಜನಪ್ರಿಯತೆಯ ಉತ್ತುಂಗಕೇರಿದ ರಾಧಿಕಾ ಆಪ್ಟೆ ಅವರ ವೃತ್ತಿಪರ ಜೀವನದಲ್ಲಿ ಮತ್ತೊಂದು ಪ್ರಮುಖ ಘಟ್ಟ. ಅವರು ತಮಿಳು ಚಿತ್ರವೊಂದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ನಟಿಸಲಿದ್ದಾರೆ.
'ಅಹಲ್ಯ' ಎಂಬ ಸಣ್ಣ ಸಿನೆಮಾದಲ್ಲಿನ ನಟನೆಗೆ ಈ ೨೯ ವರ್ಷದ ನಟಿಗೆ ಈಗ ಬಾಲಿವುಡ್ ಕೇಂದ್ರಬಿಂದುವಾಗಿದ್ದಾರೆ. ಅಲ್ಲದೆ ಇನ್ನೂ ಬಿಡುಗಡೆಯಾಗಬೇಕಿರುವ 'ಮಾಂಜಿ-ದ ಮೌಂಟೇನ್ ಮ್ಯಾನ್' ಸಿನೆಮಾದಲ್ಲಿ ಕೂಡ ತಮ್ಮ ಝಳಕು ತೋರಿಸಿದ್ದಾರೆ.
ಈಗ ರಜನಿಕಾಂತ್ ಜೊತೆ ನಟಿಸುವ ಅವಕಾಶ ಸಿಕ್ಕಿರುವ ವಿಷಯವನ್ನು ಇನ್ನೂ ಮನನ ಮಾಡಿಕೊಳ್ಳಲಾಗುತ್ತಿಲ್ಲ ಎಂದು ಅತೀವ ಸಂತಸದಲ್ಲಿರುವ ಈ ನಟಿ ತಿಳಿಸಿದ್ದಾರೆ. ಈ ಯೋಜನೆ ಅತೀವ ಸಂತಸ ತಂದಿದ್ದು ರಜನಿಕಾಂತ್ ಅವರಿಗಿಂತಲೂ ದೊಡ್ಡ ತಾರೆ ಇನ್ನೊಬ್ಬರಿಲ್ಲ ಎಂದಿದ್ದಾರೆ. ಈ ಸಿನೆಮಾದ ನಿರ್ದೇಶಕ ಪಾ ರಂಜಿತ್ ಅವರನ್ನು ಕೂಡ ಅದ್ಭುತ ನಿರ್ದೇಶಕ ಎಂದಿದ್ದಾರೆ.
ತಮಿಳು ಚಿತ್ರದ ತಮ್ಮ ಪಾತ್ರದ ಬಗ್ಗೆ ಪ್ರಶ್ನಿಸಿದಾಗ, ನಟನೆ ಅವಕಾಶ ಇರುವ ಒಳ್ಳೆಯ ಪಾತ್ರ ಇದು. ಆಗಸ್ಟ್ ಅಂತ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


