ರಾಷ್ಟ್ರೀಯ ಪ್ರಶಸ್ತಿ ಪಡೆದ ನಟನಿಗೆ ಶುಭಾಶಯ ಕೋರಲು ಸಿಎಂಗೆ ಸಮಯ ಸಿಕ್ಕಿಲ್ಲವೆ ?
62 ನೇ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಗಳಿಸಿದ ಸಂಚಾರಿ ವಿಜಯ್ ಗೆ ಶುಭಾಶಯ ಹೇಳಲು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಮಯವೇ ಸಿಕ್ಕಿಲ್ಲ !

ಬೆಂಗಳೂರು : 62 ನೇ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಗಳಿಸಿದ ಸಂಚಾರಿ ವಿಜಯ್ ಗೆ ಶುಭಾಶಯ ಹೇಳಲು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಮಯವೇ ಸಿಕ್ಕಿಲ್ಲ !
ಪ್ರಶಸ್ತಿ ಪ್ರಕಟವಾಗಿ ಒಂದು ತಿಂಗಳಾಯ್ತು.ಆದರೆ ಇಲ್ಲಿವರೆಗೆ ಮುಖ್ಯಮಂತ್ರಿ ಫೋನ್ ಮೂಲಕವಾದರೂ ವಿಜಯ್ ಗೆ ಶುಭ ಹಾರೈಸಲಿಲ್ಲ.
ಕನ್ನಡಿಗರೊಬ್ಬರು ಶ್ರೇಷ್ಠ ನಟರಾಗಿ ಪ್ರಶಸ್ತಿ ಪಡೆದಿರುವುದು ನಮ್ಮೆಲ್ಲರ ಹೆಮ್ಮೆ. ಈಗಾಗಲೇ ಪ್ರಶಸ್ತಿ ಪುರಸ್ಕೃತರಿಗೆ ಹಲವೆಡೆ ಸನ್ಮಾನಗಳನ್ನು ಮಾಡಿಯಾಗಿದೆ. ಹೀಗಿದ್ದರೂ ನಾಡಿನ ಮುಖ್ಯ ಮಂತ್ರಿಗಳಿಗೆ ಪ್ರಶಸ್ತಿ ಪುರಸ್ಕೃತರಿಗೆ ಶುಭ ಹಾರೈಸಿ ಎಂಬುದನ್ನು ನಾವು ನೆನಪಿಸ ಬೇಕೇ ? ಅಥವಾ ಇದನ್ನು ಜಾಣ ಕುರುಡು ಎಂದು ಅರ್ಥೈಸಿ ಕೊಳ್ಳಬೇಕೆ ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


